ಅರಣ್ಯ ಅಧಿಕಾರಿಗಳ ವಿರುದ್ಧ ದೂರು ನೀಡಿದರೂ ಕ್ರಮ ಜರುಗಿಸಿಲ್ಲ

Published on

ಗುಂಡ್ಲುಪೇಟೆ: ಅರಣ್ಯಾಧಿಕಾರಿಗಳು ತನ್ನ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಅಲ್ಲಿದ್ದ ಸ್ವತ್ತುಗಳನ್ನು ಎತ್ತಿಕೊಂಡು ಹೋಗಿರುವ ಬಗ್ಗೆ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸದೆ ವಿಳಂಬ ಮಾಡುತ್ತಿದ್ದಾರೆ ಎಂದು ಪಟ್ಟಣದ ನಿವಾಸಿ ಪಾಪಣ್ಣ ಆರೋಪಿಸಿದ್ದಾರೆ.

ಪರಿಶಿಷ್ಟ ಪಂಗಡಕ್ಕೆ ಸೇರಿದ ನಾನು ತಾಲೂಕಿನ ಮಡಹಳ್ಳಿ ಸಮೀಪ 2.32 ಎಕರೆ ಭೂಮಿ ಖರೀದಿಸಿ ಅಲ್ಲಿಗೆ ಬೇಲಿ ಅಳವಡಿಸಲು ತಂದಿಟ್ಟಿದ್ದ ಕಲ್ಲುಕಂಬ, ಮುಳ್ಳುತಂತಿ ಹಾಗೂ ಕಬ್ಬಿಣದ ಗೇಟ್‌ಗಳನ್ನು ಬಫರ್ ವಲಯದ ಅರಣ್ಯಾಧಿಕಾರಿಗಳು ಅತಿಕ್ರಮ ಪ್ರವೇಶ ಮಾಡಿ ಕೊಂಡೊಯ್ದಿದ್ದಾರೆ. ಅಲ್ಲದೆ ನನ್ನ ವಿರುದ್ಧ ನಕಲಿ ಪ್ರಕರಣ ದಾಖಲಿಸಿ ಖಾಸಗಿ ವಾಹಿನಿಯ ಮೂಲಕ ಪ್ರಚಾರ ಮಾಡಿಸಿ ಮಾನಹಾನಿ ಮಾಡಿದ್ದಾರೆ. ಈ ಬಗ್ಗೆ ತಾನು ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸದೆ ವಿಳಂಬ ಮಾಡುತ್ತಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಆದ್ದರಿಂದ ಯಾವುದೇ ನೋಟಿಸ್ ನೀಡದೆ ಅತಿಕ್ರಮ ಪ್ರವೇಶ ಮಾಡಿರುವ ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ಸುರೇಶ್, ಬಫರ್ ವಲಯದ ಆರ್‌ಎಫ್‌ಒ ಸತೀಶ್‌ಕುಮಾರ್, ಡಿಆಎಫ್‌ಒ ಭರತ್, ಗಾರ್ಡ್ ಪರಸಪ್ಪ ಮಾದರ್ ವಿರುದ್ಧ ಪ್ರಕರಣ ದಾಖಲಿಸಬೇಕು. ತಪ್ಪಿದಲ್ಲಿ ಅರಣ್ಯ ಇಲಾಖೆಯ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಾರಕಿಹೋಳಿ ಬ್ರಿಗೇಡ್‌ನ ಗೋವಿಂದ, ಮುಖಂಡ ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net