ಅರಟಾಳ ಪಂಚಾಯ್ತಿಯಿಂದ ಉತ್ತಮ ಕೆಲಸ

27Arartal1
Published on

ಅರಟಾಳ: ನರೇಗಾ ಯೋಜನೆಯಡಿ ನಿರ್ಮಿಸಿದ ಗ್ರಾಮ ಪಂಚಾಯಿತಿ ಕಟ್ಟಡ ತಾಲೂಕಿನಲ್ಲಿ ಮಾದರಿಯಾಗಿದ್ದು, 15ನೇ ಹಣಕಾಸು ಆಯೋಗದ ಧನಸಹಾಯದಡಿ ಅರಟಾಳ, ಬಾಡಗಿ, ಹಾಲಳ್ಳಿ ಗ್ರಾಮದ ಶಾಲೆ ಹಾಗೂ ಅಂಗನವಾಡಿಗೆ ತಲಾ 12 ಇನ್ವರ್ಟರ್ ಬ್ಯಾಟರಿ ಕೊಡುತ್ತಿರುವುದು ಮಾದರಿ ಕಾರ್ಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಈಚೆಗೆ ಇನ್ವರ್ಟರ್ ಬ್ಯಾಟರಿ ವಿತರಿಸಿ ಮಾತನಾಡಿದರು. ಗ್ರಾಪಂ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿರುವುದು ಹಾಗೂ ಇನ್ವರ್ಟರ್ ಬ್ಯಾಟರಿ ಕೊಟ್ಟಿರುವುದು ಉತ್ತಮ ಕೆಲಸವಾಗಿದೆ ಎಂದರು. ಜನರ ಬಹುದಿನಗಳ ಬೇಡಿಕೆಯಾದ ಸರ್ಕಾರಿ ಪ್ರೌಢಶಾಲೆ ಮಂಜೂರಾಗಿದೆ. ಕೆರೆ ತುಂಬುವ ಯೋಜನೆಯಡಿ ಗ್ರಾಮದ ಮೂರು ಕೆರೆಗಳನ್ನು ಶೀಘ್ರ ತುಂಬಿಸಲಾಗುವುದು. ಪಶುಆಸ್ಪತ್ರೆ ಕಟ್ಟಡ ಕಾಮಗಾರಿ ಪ್ರಾರಂಭವಾಗಿದೆ ಎಂದರು.

ಪಿಡಿಒ ಎ.ಜಿ.ಎಡಕೆ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕಾಂತಾಬಾಯಿ ಹಟ್ಟಿ, ಉಪಾಧ್ಯಕ್ಷ ಸದಾಶಿವ ಹೊನಗೌಡ, ಸದಸ್ಯ ರಾಮಪ್ಪ ಪೂಜಾರಿ, ಪಿಕೆಪಿಎಸ್ ಅಧ್ಯಕ್ಷ ಮಲ್ಲಪ್ಪ ಪೂಜಾರಿ, ಶಂಕರ ಕೆಂಚಗೊಂಡ, ಶಿವಾನಂದ ಪಾಟೀಲ, ಗಂಗವ್ವ ಅರ್ಜುಣಗಿ, ಈಶ್ವರಲಿಂಗ ಕಲಘಟಗಿ, ರಮೇಶ ಜಾಧವ, ಯಲ್ಲಪ್ಪ ಹಟ್ಟಿ, ಅರವಿಂದ ಘಾಟಗೆ, ಮನೋಹರ ಸಾಳುಂಕೆ, ಹಣಮಂತ ಹಟ್ಟಿ, ಶ್ರೀಶೈಲ ಪೂಜಾರಿ, ಗಣಪತಿ ಭಂಡಾರಿ, ಮಲ್ಲಿಕಾರ್ಜುನ ತೆಲಸಂಗ, ವಿಠ್ಠಲ ಹಟ್ಟಿ, ಗ್ರಾಮಸ್ಥರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net