

ಅರಟಾಳ: ತೆರವಾಗಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಸದಾಶಿವ ಹೊನಗೌಡ ವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಬಿ.ಎಸ್.ಯಾದವಾಡ ಘೋಷಿಸಿದರು. ಬಳಿಕ ಸದಾಶಿವ ಹೊನಗೌಡ ಅವರನ್ನು ಸತ್ಕರಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಕಾಂತಾಬಾಯಿ ಹಟ್ಟಿ, ಪಿಡಿಒ ಎ.ಜಿ. ಎಡಕೆ, ಕಾರ್ಯದರ್ಶಿ ಆನಂದ ಗಿರಿಜಾಗೋಳ, ಗ್ರಾಪಂ ಸದಸ್ಯರಾದ ರಾಮಪ್ಪ ಪೂಜಾರಿ, ಸದಾಶಿವ ಹೊನಗೌಡ, ಶಿವಾನಂದ ಖ್ಯಾಡಿ, ಮಹಾದೇವ ಡಂಗಿ, ಸಿದ್ದು ಹಳ್ಳಿ, ಶಿವಾನಂದ ನೇಮಗೌಡ, ರೇವಪ್ಪ ತೇಲಿ, ಶಿವಾನಂದ ಹೊನಗೌಡ, ಮಹಾದೇವ ಪೂಜಾರಿ, ಸದಾಶಿವ ಹೊನಗೌಡ, ಸರಸ್ವತಿ ಕಾಂಬಳೆ, ಅನ್ನಪೂರ್ಣಾ ಮುಧೋಳ, ಕಾಶವ್ವ ಹೊನಗೌಡ, ಮಹಾದೇವಿ ಪಾಟೀಲ, ಗಂಗವ್ವ ಅರ್ಜುಣಗಿ ಇತರರಿದ್ದರು.