ಅರಕವಾಡಿ ಚಿಕ್ಕಸ್ವಾಮಿ ಅವಿರೋಧ ಆಯ್ಕೆ

16Rajesh1
Published on
ಚಾಮರಾಜನಗರ: ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ  ಅರಕಲವಾಡಿ ಚಿಕ್ಕಸ್ವಾಮಿ  ಅವಿರೋಧವಾಗಿ ಆಯ್ಕೆಯಾದರು.
ನಗರದ  ಜಿಲ್ಲಾಡಳಿತ ಭವನದಲ್ಲಿರುವ  ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿಕ ಸಮಾಜದ ನೂತನ ಪದಾಧಿಕಾರಿಗಳ  ಆಯ್ಕೆ ಚುನಾವಣೆ  ನಡೆಯಿತು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸ್ಥಾನಕ್ಕೆ ಅರಕಲವಾಡಿ ಚಿಕ್ಕಸ್ವಾಮಿ,  ಉಪಾಧ್ಯಕ್ಷ ಸ್ಥಾನಕ್ಕೆ  ಆರ್. ರಾಜೇಂದ್ರ,  ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ  ಕೆ.ಎಸ್. ರಾಜು,  ಖಜಾಂಚಿ ಸ್ಥಾನಕ್ಕೆ ಎಂ.ಪಿ. ಶ್ರೀಕಂಠಮೂರ್ತಿ ಹಾಗು ರಾಜ್ಯ ಪ್ರತಿನಿಧಿ ಸ್ಥಾನಕ್ಕೆ  ರಾಘವೇಂದ್ರ ನಾಯ್ಡು ನಾಮಪತ್ರ ಸಲ್ಲಿಸಿದ್ದರು. ಈ ಐದು ಸ್ಥಾನಗಳಿಗೆ ಐವರು ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ  ಪ್ರಭಾರ ಜಂಟಿ ಕೃಷಿ ನಿರ್ದೇಶಕಿ ಕೆ.ಸಿ. ಸುಷ್ಮಾ ಅಧಿಕೃತವಾಗಿ ಘೋಷಣೆ ಮಾಡಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಎಡಿಎ ನಿಶಾಂತ್ ಕರ್ತವ್ಯ ನಿರ್ವಹಿಸಿದರು.
ಈ ವೇಳೆ ಕೃಷಿ ಸಮಾಜದ ನೂತನ ಅಧ್ಯಕ್ಷ ಅರಕಲವಾಡಿ ಚಿಕ್ಕಸ್ವಾಮಿ ಮಾತನಾಡಿ, ತಾಲೂಕಿನ ವ್ಯಾಪ್ತಿಯ  ಎಲ್ಲ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿಗಳು  ಹಾಗೂ ಪದಾಧಿಕಾರಿಗಳು ಒಮ್ಮತದಿಂದ  ನನ್ನನ್ನು ಅಧ್ಯಕ್ಷನ್ನಾಗಿ ಮಾಡಿರುವುದಕ್ಕೆ ಅಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ  ಕೃಷಿಕರು ಹಾಗೂ ಸರ್ಕಾರ ನಡುವೆ ಸೇತುವೆಯಾಗಿ ನಮ್ಮ ಕೃಷಿಕ ಸಮಾಜ ಕೆಲಸ ಮಾಡಲಿದೆ. ರೈತರಿಗೆ ಸರ್ಕಾರದಿಂದ ದೊರೆಯುವ ನೆರವು ಹಾಗೂ ತಾಂತ್ರಿಕ ಮಾಹಿತಿಗಳು ಸೇರಿದಂತೆ ಕಾಲ ಕಾಲಕ್ಕೆ ರೈತರಿಗೆ ದೊರೆಯುವ ಸಲವತ್ತುಗಳನ್ನು ಕಲ್ಪಿಸಿಕೊಟ್ಟು  ರೈತರ ಆರ್ಥಿಕ ಅಭಿವೃದ್ದಿಪಡಿಸುವುದು ಮೂಲ ಉದ್ದೇಶವಾಗಿದೆ.  ಕೃಷಿಕ ಸಮಾಜದ ಮೂಲಕ ರೈತರಿಗೆ ತರಬೇತಿ, ಕಾರ್ಯಾಗಾರ  ಸೇರಿದಂತೆ ರೈತರನು ಕೃಷಿಯ ಬಗ್ಗೆ ಜಾಗೃತಿಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪ್ರತಿನಿಧಿಗಳಾದ ವಿ.ವಿ. ಪ್ರಸಾದ್, ವೃಷಬೇಂದ್ರಸ್ವಾಮಿ,  ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಯಳಂದೂರು ಎಸ್. ರವಿ,  ಚಾ.ನಗರ ಅಧ್ಯಕ್ಷ  ಎಸ್. ಶಾಂತಪ್ಪ ಕೊತ್ತಲವಾಡಿ, ಗುಂಡ್ಲುಪೇಟೆ ಅಧ್ಯಕ್ಷ   ದೇಪುಪುರ ಸಿದ್ದಪ್ಪ, ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ವಡ್ಗಲ್‌ಪುರ ದೊರೆಸ್ವಾಮಿ, ಕೃಷಿಕ ಸಮಾಜದ ತಾಲೂಕು ಉಪಾಧ್ಯಕ್ಷ ತಮ್ಮಡಹಳ್ಳಿ ಶಿವಕುಮಾರ್,  ನಿರ್ದೇಶಕ ಯರಗನಹಳ್ಳಿ ಶಿವಕುಮಾರ್, ಜಿಲ್ಲಾ ಸಹಕಾರ ಯೂನಿಯನ್ ಮಾಜಿ ಅಧ್ಯಕ್ಷ ಮಡಿವಾಳಪ್ಪ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ  ಮೂಡ್ಲುಪುರ ನಂದೀಶ್,  ನಿರ್ದೇಶಕ ಬಿಸಲವಾಡಿ ಉಮೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net