ಅರಕಲಗೂಡು ತಾಲೂಕಿನಲ್ಲಿ ಜಿಟಿಜಿಟಿ ಮಳೆ

ಅರಕಲಗೂಡು ತಾಲೂಕಿನಲ್ಲಿ ಶನಿವಾರ ಬಿದ್ದ ಮಳೆಗೆ ರಾಮನಾಥಪುರ ಐಬಿ ಸರ್ಕಲ್‌ನಲ್ಲಿ ಹೊಂಡವಾಗಿದ್ದು ಕೆಸರುಮಯ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳು.
19ark5
Published on

ಅರಕಲಗೂಡು: ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಮುಂಜಾನೆ ಜಿಟಿಜಿಟಿ ಬಿದ್ದ ಮಳೆ ಬೆಳೆಗಳಿಗೆ ಚೇತರಿಕೆ ನೀಡಲು ಸಹಕಾರಿಯಾಗಿದ್ದು ರೈತರಲ್ಲಿ ಸಂತಸ ಮೂಡಿಸಿದೆ.


ಕಳೆದ 15 ದಿನಗಳಿಂದ ಮುಂಗಾರು ಕೈಕೊಟ್ಟು ಬೇಸಿಗೆಯಂತೆ ಬಿಸಿಲು ಸುಡಲಾರಂಭಿಸಿದ ಪರಿಣಾಮ ಬಿತ್ತನೆಯಾಗಿದ್ದ ಬೆಳೆಗಳು ನೀರಿಲ್ಲದೆ ಬಾಡಲಾರಂಬಿಸಿದ್ದವು. 16,840 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಪ್ರಮುಖ ವಾಣಿಜ್ಯ ಬೆಳೆ ಮುಸುಕಿನ ಜೋಳ ಕಾಳು ಕಟ್ಟುವ ಹಂತದಲ್ಲಿ ಮಳೆಯಾಗದೆ ರೈತರು ಚಿಂತಾಕ್ರಾಂತರಾಗಿದ್ದರು. ಇದಲ್ಲದೆ 170 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ರಾಗಿ, 280 ಹೆಕ್ಟೇರ್‌ನಲ್ಲಿ ಆಲೂಗೆಡ್ಡೆ, 2355 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ, 80 ಹೆಕ್ಟೇರ್‌ನಲ್ಲಿ ಎಣ್ಣೆಕಾಳು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದ ರೈತರು ತೀವ್ರ ಆತಂಕಕ್ಕೆ ಒಳಗಾಗಿ ತಲೆಮೇಲೆ ಕೈಹೊತ್ತು ಕುಳಿತಿದ್ದರು. ಈಗ ಬಿದ್ದಿರುವ ಮಳೆ ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿದೆ.


ಅರಕಲಗೂಡು 8.1 ಮಿ.ಮೀ., ಮಲ್ಲಿಪಟ್ಟಣ 6 ಮಿ.ಮೀ., ಬಸವಾಪಟ್ಟಣ 12.2 ಮಿ.ಮೀ., ರಾಮನಾಥಪುರ 3.5 ಮಿ.ಮೀ., ದೊಡ್ಡಮಗ್ಗೆ 4. 2 ಮಿ.ಮೀ., ಕೊಣನೂರಿನಲ್ಲಿ 3.6 ಮಿ.ಮೀ.ನಷ್ಟು ಮಳೆ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net