ಅರಕಲಗೂಡು ತಾಪಂ ಅಧ್ಯಕ್ಷರಾಗಿ ಸರಿತಾ ಅವಿರೋಧ ಆಯ್ಕೆ

IMG-20200720-WA0020.jpg
Published on

ಅರಕಲಗೂಡು: ಇಲ್ಲಿನ ತಾಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ಸರಿತಾ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷೆಯಾಗಿದ್ದ ವೀಣಾ ಮಂಜುನಾಥ್ ಇತ್ತೀಚೆಗೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಹಾಲಿ ಉಪಾಧ್ಯಕ್ಷರಾಗಿದ್ದ ಎಸ್.ಆರ್. ನಾಗರಾಜ್ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ‌ ಸ್ವೀಕರಿದ್ದರು.

ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ವಡ್ಡರಹಳ್ಳಿ ಕ್ಷೇತ್ರದ ಸರಿತಾ ಆಯ್ಕೆಯಾದರು.
ಪಂಚಾಯಿತಿಯಲ್ಲಿ ಒಟ್ಟು ೧೯ ಸ್ಥಾನಗಳಲ್ಲಿ ಕಾಂಗ್ರೆಸ್ ೧೧, ಜೆಡಿಎಸ್ ೭, ಬಿಜೆಪಿ ೧ ಸದಸ್ಯರು ಇದ್ದಾರೆ ಇಂದು ೧೪ ಸದಸ್ಯರು ಹಾಜರಾಗಿದ್ದರು.

ಸಕಲೇಶಪುರ ಉಪ ವಿಭಾಗಾಧಿಕಾರಿ ಗಿರೀಶ್ ನಂದನ್‌ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ತಾಪಂ ಇಒ ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net