ಅಯ್ಯಪ್ಪಸ್ವಾಮಿಗೆ ಅದ್ದೂರಿ ಪಡಿಪೂಜಾ ಮಹೋತ್ಸವ

Ayyappaswamy
Published on

ಚಿತ್ರದುರ್ಗ: ಕೋಟೆನಾಡಿನ ಅಯ್ಯಪ್ಪಸ್ವಾಮಿ ಸನ್ನಿಧಾನದ ರಜತ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಡಿಪೂಜಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.

ಪಡಿಪೂಜೆ ಅಂಗವಾಗಿ 18 ಮೆಟ್ಟಿಲುಗಳನ್ನು ಪೂರ್ಣಕುಂಭ, ವಿವಿಧ ಬಗೆಯ ಪುಷ್ಪಗಳಿಂದ ವಿಶೇಷವಾಗಿ ಭಕ್ತರ ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು. ಸಂಜೆ 6.30ರಿಂದ ಭಗವತಿ ಸೇವೆ, ಅತ್ತಾಳ ಪೂಜೆ ನಡೆಯಿತು.

ಇದಕ್ಕೂ ಮುನ್ನ ಗಣಪತಿ ಹೋಮ, ಉದಯಾಸ್ತಮಾನ ಪೂಜೆ, ಆಂಜನೇಯ ಮೂಲಮಂತ್ರ ಹೋಮ, ಪೂರ್ಣಾಹುತಿಯೊಂದಿಗೆ ವಿವಿಧ ಪೂಜಾ ಕೈಂಕರ್ಯ ನೆರವೇರಿದವು.

ಅಯ್ಯಪ್ಪಸ್ವಾಮಿ, ಮಹಾಗಣಪತಿ, ಸುಬ್ರಹ್ಮಣ್ಯ, ಭೀಮಾಶಂಕರ, ಭೀಮಾಂಜನೇಯ ಸ್ವಾಮಿಯ ದರ್ಶನ ಪಡೆದ ಅನೇಕ ಭಕ್ತರು ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net