ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪೂಜೋತ್ಸವ

8spt1
ಸೋಮವಾರಪೇಟೆ ಸಮೀಪ ಕಿಬ್ಬೆಟ್ಟ ಅಯ್ಯಪ್ಪ ಕಾಲನಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನಡೆದ ವಾರ್ಷಿಕ ಪೂಜೆಯಲ್ಲಿ ಭಕ್ತಾದಿಗಳು ಪೂಜೆ ಸಲ್ಲಿಸಿದರು.
Published on

ಸೋಮವಾರಪೇಟೆ: ಕಿಬ್ಬೆಟ್ಟ ಅಯ್ಯಪ್ಪ ಕಾಲನಿಯ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ದೇವಾಲಯದ ಪ್ರಥಮ ವರ್ಷದ ವಾರ್ಷಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ಭಾನುವಾರ ನೆರವೇರಿತು.

ಶ್ರೀ ಗಣಪತಿ, ಶ್ರೀ ಭಗವತಿ ಹಾಗೂ ಧರ್ಮಶಾಸ್ತ್ರ ಶ್ರೀ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆಗಳು ನೆರವೇರಿದವು. ಬೆಳಗ್ಗೆ ಗಣಪತಿ ಹೋಮ, ಅಷ್ಟಾಭಿಷೇಕ, ದೇವಿ ಕಲಸ ಪೂಜೆ ಹಾಗೂ ಸಂಜೆ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಶ್ರೀ ಅಯ್ಯಪ್ಪ ಆನಂದ ನೃತ್ಯ ನಡೆಯಿತು. ಕೇರಳ ಕಣ್ಣೂರಿನ ಬ್ರಹ್ಮಶ್ರೀ ಹರಿಕೃಷ್ಣನ್ ನಂಬೂದಿರಿ ಅವರು ಪೂಜಾ ನೇತೃತ್ವ ವಹಿಸಿದ್ದರು. ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net