ಅಯ್ಯಪ್ಪಸ್ವಾಮಿ ಆಭರಣ ಮೆರವಣಿಗೆ

Ayyappaswamy
Published on

ಚಿತ್ರದುರ್ಗ: ನಗರದ ಪ್ರಮುಖ ಬೀದಿಗಳಲ್ಲಿ ಮೆದೇಹಳ್ಳಿ ರಸ್ತೆಯಲ್ಲಿ ಇರುವ ಅಯ್ಯಪ್ಪಸ್ವಾಮಿಯ ಆಭರಣಗಳ ಮೆರವಣಿಗೆ ಭಾನುವಾರ ಶಾಸ್ತ್ರೋಕ್ತವಾಗಿ ಜರುಗಿತು.

ಶಬರಿಮಲೆಯಲ್ಲಿ ವರ್ಷಕೊಮ್ಮೆ ಅಯ್ಯಪ್ಪಸ್ವಾಮಿಗೆ ಹಾಕುವಂಥ ಆಭರಣಗಳ ಮೆರವಣಿಗೆ ಯಾವ ರೀತಿ ನಡೆಯುತ್ತದೋ ಅದೇ ಮಾದರಿಯಲ್ಲಿ ಇಲ್ಲಿನ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನಿಂದ ಆಚರಿಸಲಾಯಿತು.

ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ಅಯ್ಯಪ್ಪಸ್ವಾಮಿಯ ಆಭರಣದ ಭವ್ಯ ಮೆರವಣಿಗೆಯನ್ನು ಅಯ್ಯಪ್ಪ ಮಾಲಾಧಾರಿಗಳು ಹೊತ್ತು ದೇಗುಲಕ್ಕೆ ತಂದರು.

ಸ್ವಾಮಿ ದೇಗುಲದಲ್ಲಿ ಪೂಜೆ ಸ್ವೀಕರಿಸಿ, ಹೊರ ಬರುತ್ತಿದ್ದಂತೆ ಗರುಡ ಆಗಮಿಸಿ ಆಭರಣದ ಸುತ್ತ ಮೂರು ಪ್ರದಕ್ಷಿಣೆ ಹಾಕಿದ್ದು, ವಿಶೇಷವಾಗಿತ್ತು. ಅಲ್ಲಿಂದ ವಿವಿಧ ದೇಗುಲದಲ್ಲಿ ಪೂಜೆ ಸ್ವೀಕರಿಸಿ, ಅಯ್ಯಪ್ಪ ದೇಗುಲಕ್ಕೆ ತಲುಪಿದ ನಂತರ ಆ ಆಭರಣಗಳನ್ನು ಅಯ್ಯಪ್ಪಸ್ವಾಮಿಗೆ ಹಾಕಲಾಯಿತು.

ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್, ಪದಾಧಿಕಾರಿಗಳಾದ ವೆಂಕಟೇಶ್, ರೇಷ್ಮೆ ಮಂಜುನಾಥ್, ಮೋಹನ್‌ಕುಮಾರ್, ಜಗದೀಶ್, ತಿಮ್ಮಣ್ಣ, ಬೆಟ್ಟದ ಮಲ್ಲಪ್ಪ, ಮಿಠಾಯಿ ಮುರುಘೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net