ಅಯ್ಯಪ್ಪ ಸ್ವಾಮಿ ದೇವಳದಲ್ಲಿ ಅನ್ನದಾನಕ್ಕೆ ಚಾಲನೆ

CTD AYAPPA SWAMI--
Published on

ಚಿತ್ರದುರ್ಗ: ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ 60 ದಿನಗಳ ಕಾಲ ಏರ್ಪಡಿಸಿರುವ ನಿತ್ಯಅನ್ನದಾನ ಕಾರ‌್ಯಕ್ರಮ, ನಗರದ ಮೆದೇಹಳ್ಳಿ ರಸ್ತೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಶನಿವಾರ ಆರಂಭವಾಯಿತು.

ನಗರದ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಕಾರ‌್ಯದರ್ಶಿ ಸುಜಾತಾ ಲಿಂಗಾರೆಡ್ಡಿ ಹಾಗೂ ಭೀಮಸಮುದ್ರ ಗ್ರಾಪಂ ಸದಸ್ಯ ವಿನಯ್‌ಕುಮಾರ್ ಕಾರ‌್ಯಕ್ರಮಕ್ಕೆ ಚಾಲನೆ ನೀಡಿದರು.

ಸತೀಶ್‌ಶರ್ಮ ನೇತೃತ್ವದಲ್ಲಿ ಶ್ರೀ ಗಣಹೋಮ, ಶ್ರೀ ಚಂಡಿಕಾ ಹೋಮದೊಂದಿಗೆ ಪೂಜೆ ನೆರವೇರಿಸಲಾಯಿತು. ಶ್ರೀ ಅಯ್ಯಪ್ಪ ಸ್ವಾ ಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶರಣ್‌ಕುಮಾರ್, ಮಲ್ಲಿಕಾರ್ಜುನ್, ವೆಂಕಟೇಶ್, ಸೂರಪ್ಪ, ರೇಷ್ಮೆ ಮಂಜುನಾಥ್, ಚಂದ್ರಶೇಖರ್, ಇಂದ್ರಣ್ಣ ಇತರರು ಇದ್ದರು.

ಡಿಸೆಂಬರ್ 12 ರಂದು ಸಂಜೆ 7 ಕ್ಕೆ ಪಡಿಪೂಜೆ, 22 ರಂದು ಮಧ್ಯಾಹ್ನ 12 ಕ್ಕೆ ಮಹಾ ಅನ್ನದಾನ ಕಾರ‌್ಯಕ್ರಮ, 2025 ಜನವರಿ 13 ರಂದು ಸಂಜೆ 6 ಕ್ಕೆ ನಗರದಲ್ಲಿ ಶ್ರೀ ಸ್ವಾಮಿಯ ಆಭರಣ ಮೆರವಣಿಗೆ, 14 ರಂದು ಸ್ವಾಮಿ ಸನ್ನಿಧಾನದಲ್ಲಿ ವಿಶೇಷ ಲಕ್ಷ ದೀಪೋತ್ಸವ ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net