

ಎನ್.ಆರ್.ಪುರ: ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ 34ನೇ ವರ್ಷದ ದೀಪೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ದೀಪೋತ್ಸವ ಅಂಗವಾಗಿ ಮಂಗಳವಾರ ಬೆಳಗ್ಗೆ 6.30ಕ್ಕೆ ಧ್ವಜಾರೋಹಣ, ಬೆಳಗ್ಗೆ 7ರಿಂದ ಗಣಹೋಮ, ನಾಗರಾಜ ಹೋಮ, ಸುಬ್ರಹ್ಮಣ್ಯ ಹೋಮ, ಅಯ್ಯಪ್ಪಸ್ವಾಮಿ ಹೋಮ, ತುಪ್ಪದ ಅಭಿಷೇಕ, 11.30ಕ್ಕೆ ಸಾಮೂಹಿಕ ಶ್ರೀ ಸಸತ್ಯನಾರಾಯಣ ಪೂಜೆ, ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಸಂಜೆ 6 ಗಂಟೆಗೆ ತಾಲಪೊಲ್ಲಿ ಮೆರವಣಿಗೆಯಲ್ಲಿ ಸಾಲು ದೀಪಗಳ ಮೆರವಣಿಗೆ ಪೇಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದವರೆಗೂ ನಡೆಯಿತು. ಮೆರವಣಿಗೆಯಲ್ಲಿ ಪುಟಾಣಿ ಹೆಣ್ಣು ಮಕ್ಕಳು ದೀಪಗಳನ್ನು ಹಿಡಿದು ಸಾಗಿದರು. ಮಂಗಳ ವಾದ್ಯ, ಚಂಡೆ ಮೇಳದೊಂದಿಗೆ ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಾತ್ರಿ 9.30ಕ್ಕೆ ರಾಗಮಯೂರಿ ಅಕಾಡೆಮಿ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ರಾತ್ರಿ 1 ಗಂಟೆಗೆ ಲೋಕಮಾತೆ ಮಾಳಿಗೆ ಪುರತ್ತಮ್ಮನವರ ಸ್ವಾಗತ, ರಾತ್ರಿ 1.30ಕ್ಕೆ ಅಪ್ಪಂವಾರಲ್‌ನಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಕುದಿಯುವ ಎಣ್ಣೆಯಲ್ಲಿ ಬರಿಗೈಯಲ್ಲಿ ಪ್ರಸಾದ ತೆಗೆದರು. ರಾತ್ರಿ 2.30 ರಿಂದ 4.30ರವರೆಗೆ ಸ್ವಾಮಿಗೆ ಕೆಂಡ ಸೇವೆ, ಬುಧವಾರ ಬೆಳಗ್ಗೆ 6 ಗಂಟೆಗೆ ಸ್ವಾಮಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗದೊಂದಿಗೆ ದೀಪೋತ್ಸವ ಸಂಪನ್ನಗೊಂಡಿತು.
ಶಾಸಕ ಟಿ.ಡಿ.ರಾಜೇಗೌಡ ವಿಶೇಷ ಪೂಜೆ ಸಲ್ಲಿಸಿದರು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಸೋಮಶೇಖರ್ ಶೆಟ್ಟಿ, ಕೆ.ವಿ.ಜಯಕರ, ಪಿ.ಆರ್.ಸದಾಶಿವ, ಪಿ.ಆರ್.ಸುಕುಮಾರ್, ಪಿ.ಆರ್.ಅರವಿಂದಾಚಾರ್, ಎಸ್.ಗುರುಮೂರ್ತಿ, ಕೆ.ಸಂತೋಷ್‌ಕುಮಾರ್, ಮಂಜುನಾಥ್ ಶೆಟ್ಟಿ, ಆರ್.ಶಂಕರ್, ಚಂದ್ರಶೇಖರ್, ಅರುಣ್ ಜೈನ್, ಸುರೇಶ್, ಮಂಜುನಾಥ್ ಲಾಡ್, ಟಿ.ಪ್ರಕಾಶ್, ಲೋಕೇಶ್ ಗುರುಸ್ವಾಮಿ ಇತರರಿದ್ದರು.