ಅಯೋಧ್ಯೆಯಲ್ಲಿ ಭೀಕರ ಅಪಘಾತ: ಕಲಬುರಗಿಯ ಮೂವರ ಸಾವು

Crime Logo
Published on

ಕಲಬುರಗಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭೀಕರ ರಸ್ತೆಯ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಕಲಬುರಗಿಯ ಮೂಲದ ಮೂವರು ದುರ್ಮರಣ ಹೊಂದಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಕಲಬುರಗಿ ಮೂಲದ 22 ಜನರು ತಮ್ಮ ಕುಟುಂಬದ ಸಮೇತ ಕಾಶಿ ವಿಶ್ವನಾಥನ ದರ್ಶನಕ್ಕಾಗಿ ಯಾತ್ರೆಗೆ ತೆರಳಿದ್ದು, ಕಾಶಿ ವಿಶ್ವನಾಥನ ದರ್ಶನ ಮುಗಿಸಿಕೊಂಡು ಟಿಟಿಯಲ್ಲಿ ಅಯೋಧ್ಯೆಯತ್ತ ತೆರಳುವ ಸಂದರ್ಭದಲ್ಲಿ ಶುಕ್ರವಾರ ತಡರಾತ್ರಿ ಟಿಟಿ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ,ಯಾತ್ರೆಯಲ್ಲಿದ್ದ ಕಲಬುರಗಿ ಮೂಲದ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಕಲಬುರಗಿ ಮೂಲದ ಮೂವರಾದ ಶಿವರಾಜ್, ಕಾಶಿನಾಥ್, ತಂಗೆಮ್ಮಾ ಎಂಬುವವರು ಮೃತಪಟ್ಟ ದುರ್ದೈವಿಗಳಾಗಿದ್ದು, ಅಪಘಾತದಲ್ಲಿ ಮೂವರು ಮೃತಪಟ್ಟಿರೆ,ಇನ್ನೂಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳಿಗೆ ಅಯೋಧ್ಯೆಯಲ್ಲಿನ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net