ಅಯೋಧ್ಯೆ ಶ್ರೀರಾಮಂದಿರ ಉದ್ಘಾಟನಾ ಸಮಾರಂಭ,ಶ್ರೀ ಬಸವಮೂರ್ತಿ ಮಾದಾರ ಶ್ರೀಗಳಿಗೆ ಆಹ್ವಾನ

CTD 10 SRI MADARA SRI--05
Published on

ಚಿತ್ರದುರ್ಗ: ಅಯೋಧ್ಯೆಯಲ್ಲಿ 2024 ಜನವರಿ 22ರಂದು ನಡೆಯಲಿರುವ ಶ್ರೀರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಮಾದಾರ ಚ ನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರಿಗೆ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರದಿಂದ ಆಹ್ವಾ ನ ಬಂದಿದೆ.
ಕ್ಷೇತ್ರದ ಪ್ರಧಾನ ಕಾರ‌್ಯದರ್ಶಿ ಚಂಪತ್‌ರೈ ಅವರು, ಡಿ.3ರಂದು ಬರೆದಿರುವ ಪತ್ರದಲ್ಲಿ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಆ ಯೋಧ್ಯೆಗೆ ಬರುವಂತೆ ಸ್ವಾಮೀಜಿಯನ್ನು ಆಹ್ವಾನಿಸಿದ್ದಾರೆ. 500 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ಶ್ರೀರಾಮನ ಜನ್ಮ ಭೂ ಮಿಯಲ್ಲಿ ಭವ್ಯಮಂದಿರದ ನಿರ್ಮಾಣವಾಗಿದೆ.
ಇದರ ಅವಿಸ್ಮರಣೀಯ ಉದ್ಘಾಟನಾ ಸಮಾರಂಭದಲ್ಲಿ ತಾವು ಉಪಸ್ಥಿತರಿರ ಬೇಕೆಂದು ಶ್ರೀಗಳಿಗೆ ಬರೆದಿರುವ ಪತ್ರದಲ್ಲಿ ರೈ ಮನವಿ ಮಾಡಿದ್ದಾರೆ. ಶ್ರೀ ರಾಮ ಮಂದಿರದ ಶಂಕುಸ್ಥಾಪನಾ ಸಮಾರಂಭದಲ್ಲಿ ತಾವು ಭಾಗಿಯಾಗಿದ್ದೇವು. ಈಗ ಮಂದಿರದ ಉದ್ಘಾಟನಾ ಸಮಾ ರಂಭಕ್ಕೆ ಆಹ್ವಾನ ಬಂದಿದೆ. ಈಚೆಗೆ ತಮಗೆ ಈ ಆಹ್ವಾನ ಪತ್ರಿಕೆ ತಲುಪಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net