ಅಮ್ಮಿನಬಾವಿಯ ಚಾರಿತ್ರಿಕ ಮೊಹರಂ ಆಚರಣೆ

29 Dwd 1
Published on

ಧಾರವಾಡ: ತಾಲೂಕಿನ ಅಮ್ಮಿನಬಾವಿಯಲ್ಲಿ 2 ಶತಮಾನಗಳಿಂದಲೂ ನಡೆಯುತ್ತಿರುವ ಮೋಹರಂ ಆಚರಣೆಗೆ ಚಾರಿತ್ರಿಕ ಹಿನ್ನೆಲೆ ಇದ್ದು, ಹಿಂದು- ಮುಸ್ಲಿಂ ಜನತೆಯ ನೇತೃತ್ವದಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ಜರುಗಲಿದೆ.

ಗ್ರಾಮದ ಮಸೀದಿಯಲ್ಲಿ ಗುತ್ತೇಸಾಬ್ ಹಾಗೂ ಕಾಸೀಂದುಲೈಃ ಎಂಬ ಪಾಂಜಾಗಳನ್ನು ಪ್ರತಿಷ್ಠಾಪಿಸಲಾಗಿದೆ. ಎರಡೂ ದೇವರುಗಳಿಗೆ ಭಕ್ತರೇ ಬೆಳ್ಳಿಯ ಪಂಜಾಗಳನ್ನು ಮಾಡಿಸಿಕೊಟ್ಟಿದ್ದಾರೆ. ಗುತ್ತೇಸಾಬ್ ದೇವರ ಮೂಲ ಪಂಜಾ ಹಾವೇರಿ ಸಮೀಪದ ಗುತ್ತಲದಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ಗ್ರಾಮದ ಜೈನ ಧರ್ಮದ ಮುಖಂಡರಾಗಿದ್ದ ದಿ. ರಾವಬಹದ್ದೂರ ಪಂಪಾಪತಿ ದೇಸಾಯಿ ಅವರು ಗುತ್ತೇಸಾಬ್ ಮೂಲ ಪಂಜಾವನ್ನೇ ಹೋಲುವಂತೆ ಬೆಳ್ಳಿಯಿಂದ ಹೊಸ ಪಂಜಾ ಮಾಡಿಸಿಕೊಟ್ಟಿದ್ದಾರೆ. ಇದು ಭಾವೈಕ್ಯ ಧರ್ಮವನ್ನು ಎತ್ತಿತೋರಿಸುತ್ತದೆ.

ಗುದ್ದಲಿ ಪೂಜೆಯೊಂದಿಗೆ ಆರಂಭಗೊಳ್ಳುವ ಮೊಹರಂ ಆಚರಣೆ ಭಾನುವಾರ ಸಂಜೆ ಸಂಪನ್ನಗೊಳ್ಳಲಿದೆ. ಅಂದು ಬೆಳಗ್ಗೆ ಉಭಯ ಪಂಜಾಗಳನ್ನು ಹೊತ್ತುಕೊಂಡು ಅಗ್ನಿ ಹಾಯುವ ಪ್ರಕ್ರಿಯೆ ನಡೆಯುತ್ತದೆ. ನಂತರ ಡೋಲಿ ಸಮೇತ ಉಭಯ ಪಂಜಾಗಳು ವಿವಿಧ ಜಾನಪದ ವಾದ್ಯ ಮೇಳಗಳೊಂದಿಗೆ ಗ್ರಾಮದ ಬಡಾವಣೆಗಳಲ್ಲಿ ಸಂಚರಿಸುತ್ತವೆ. ಗುತ್ತೇಸಾಬ್ ಮತ್ತು ಕಾಸೀಂದುಲೈಃ ದೇವರಲ್ಲಿ ಮಾಡಿಕೊಂಡ ಭಕ್ತರ ಸಂಕಲ್ಪಗಳು ಈಡೇರಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net