ಅಮ್ಮತ್ತೀರ ವಿರುದ್ಧ ಪುತ್ತಾಮನೆ ಗೆಲುವು

30 gkp 01
Published on

ಗೋಣಿಕೊಪ್ಪ: ಅಖಿಲ ಅಮ್ಮಕೊಡವ ಸಮಾಜ ಮತ್ತು ಅಮ್ಮತ್ತೀರ ಕುಟುಂಬ ಸಹಯೋಗದಲ್ಲಿ ಹಾತೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅಮ್ಮತ್ತೀರ ಕ್ರಿಕೆಟ್ ನಮ್ಮೆಯಲ್ಲಿ ಅತಿಥೇಯ ಅಮ್ಮತ್ತಿರ ತಂಡವು ಟೂರ್ನಿಯಿಂದ ಹೊರ ಬಿದ್ದಿದೆ. ಪುತ್ತಾಮನೆ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸೋತು ನಿರಾಸೆ ಅನುಭವಿಸಿತು.


ಮೂರು ದಿನಗಳ ಅಮ್ಮತ್ತೀರ ಕ್ರಿಕೆಟ್ ನಮ್ಮೆ ಸೋಮವಾರ ಮುಕ್ತಾಯಗೊಳ್ಳಲಿದ್ದು, ಮಧ್ಯಾಹ್ನ 2 ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ.


ಫಲಿತಾಂಶ: ಪುತ್ತಾಮನೆ ತಂಡವು ಅಮ್ಮತ್ತೀರ (ಬಿ) ತಂಡವನ್ನು 25 ರನ್‌ಗಳಿಂದ ಸೋಲಿಸಿತು. ಪುತ್ತಾಮನೆ ಮೊದಲು ಬ್ಯಾಟಿಂಗ್ ಮಾಡಿ 1 ವಿಕೆಟ್ ನಷ್ಟಕ್ಕೆ 55 ರನ್ ದಾಖಲಿಸಿತು. ಅಮ್ಮತ್ತೀರ 3 ವಿಕೆಟ್ ಕಳೆದುಕೊಂಡು 30 ರನ್ ದಾಖಲಿಸಿ ಸೋಲಿಗೆ ಶರಣಾಯಿತು. ಬಾನಂಡ ತಂಡವು ನಾಳಿಯಮ್ಮನ ತಂಡವನ್ನು 28 ರನ್‌ಗಳಿಂದ ಸೋಲಿಸಿತು. ಬಾನಂಡ ಮೊದಲು ಬ್ಯಾಂಟ್ ಮಾಡಿ ನಿಗದಿತ 5 ಓವರ್‌ಗಳಿಗೆ 1 ವಿಕೆಟ್ ಕಳೆದುಕೊಂಡು 58 ರನ್ ದಾಖಲಿಸಿತು. ನಾಳಿಯಮ್ಮನ 2 ವಿಕೆಟ್ ಕಳೆದುಕೊಂಡು 30 ರನ್ ದಾಖಲಿಸಿ ಸೋಲೊಪ್ಪಿಕೊಂಡಿತು. ಮನ್ನಕಮನೆ ತಂಡವು ಚೊಟ್ಟೋಳಿಯಮ್ಮನ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತು. ಚೊಟ್ಟೋಳಿಯಮ್ಮನ 4 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿತು. ಮನ್ನಕಮನೆ 3.5 ಓವರ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.

ಸಮಾರೋಪ: ಮೇ 1ರಂದು (ಸೋಮವಾರ) ಮಧ್ಯಾಹ್ನ 2.30ಕ್ಕೆ ಸಮಾರೋಪ ನಡೆಯಲಿದೆ. ಅಮ್ಮತ್ತೀರ ಕ್ರಿಕೆಟ್ ಕಪ್ ಅಧ್ಯಕ್ಷ ಅಮ್ಮತ್ತೀರ ಆರ್.ಪ್ರಸಾದ್, ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಎನ್.ಪ್ರತ್ಯು, ಕಾರ್ಯದರ್ಶಿ ಪುತ್ತಾಮನೆ ಅನಿಲ್ ಪ್ರಸಾದ್, ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ, ಸಮಾಜದ ಪ್ರಮುಖರಾದ ಡಾ.ಹೆಮ್ಮಚ್ಚಿ ಮನೆ ಸರಸ್ವತಿ ಸೋಮೇಶ್, ಚಮ್ಮಣಮಾಡ ಬಿ.ಗಿರೀಶ್, ಮನ್ನಕಮನೆ ಕೆ.ರವಿ, ಅಮ್ಮತ್ತೀರ ರೇವತಿ ಪರಮೇಶ್ವರ್, ಬಾನಂಡ ಆಶಾ ಸುಧನ್, ಮನ್ನಕಮನೆ ಶ್ವೇತಾ ರವಿ, ಬಾಚಮ್ಮಂಡ ಬಿ.ಮಾದಮಯ್ಯ, ಮನ್ನಕಮನೆ ಸೌಮ್ಯಾ ಬಾಲು, ಅಮ್ಮತ್ತೀರ ಆರತಿ ಸುರೇಶ್, ಅಮ್ಮತ್ತೀರ ವಿ.ರಾಜೇಶ್, ಪುತ್ತಾಮನೆ ಜೀವನ್, ಹೆಮ್ಮಚ್ಚಿಮನೆ ಧರಣಿ ಆಶಿತಾ, ನೆರೆಯಂಡಮ್ಮಂಡ ಎಸ್.ಬೆಳ್ಯಪ್ಪಮಯ್ಯ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net