

ಯಡ್ರಾಮಿ: ಅನಾರೋಗ್ಯದಿಂದ ಮೃತಪಟ್ಟ ಮಂಗ, ಅಮ್ಮಾ ಅಮ್ಮಾ.. ಎಂದು ಎಬ್ಬಿಸುತ್ತಿರುವ ಕಂದಮ್ಮ.. ಎಷ್ಟು ಕರೆದರೂ ತಾಯಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ್ದರಿಂದ ನೋವಿನಿಂದ ಕಿರುಚಾಡಿದ ಮರಿ. ಇಂತಹ ಹೃದಯ ಕಲಕುವ ದೃಶ್ಯಕ್ಕೆ ಮಳ್ಳಿ ಗ್ರಾಮ ಸಾಕ್ಷಿಯಾಯಿತು.
ಮಳ್ಳಿಯಲ್ಲಿ ಬಹುದಿನಗಳಿಂದ ಮಂಗ(ಕೋಡAಗಿ)ಗಳ ಗುಂಪೊAದು ಠಿಕಾಣಿ ಹೂಡಿತ್ತು. ಸೋಮವಾರ ಬೆಳಗ್ಗೆ ಈ ಗುಂಪಿನಲ್ಲಿದ್ದ ಮಂಗವೊAದು ಅನಾರೋಗ್ಯದಿಂದ ಮೃತಪಟ್ಟು ಮರದ ಕೆಳಗೆ ಬಿದ್ದಿತ್ತು. ಇದರ ಮರಿ ತಾಯಿ ಎಬ್ಬಿಸಲು ಸಾಕಷ್ಟು ಒದ್ದಾಡುತ್ತಿತ್ತು. ಕಣ್ಣೀರು ಹಾಕುತ್ತಲೇ ತಬ್ಬಿಕೊಂಡು ಕುಳಿತಿತ್ತು. ಈ ದೃಶ್ಯ ಕಂಡ ಸ್ಥಳೀಯರು ಮರಿಯನ್ನು ಬೇರೆಡೆ ಕರೆತಂದರೂ ಮತ್ತೆ ತಾಯಿ ಬಳಿ ಹೋಗಿ ಅಳುತ್ತಿತ್ತು.
ಗ್ರಾಮಸ್ಥರು ಹಿಂದು ಸಂಪ್ರದಾಯದAತೆ ವಿಶೇಷ ಪೂಜೆ, ಆರತಿ ಬೆಳಗಿ ಕುರ್ಚಿ ಮೇಲೆ ಕೂರಿಸಿ ಹನುಮಾನ ದೇವಸ್ಥಾನವರೆಗೆ ಮೆರವಣಿಗೆ ನಡೆಸಿದ ಬಳಿಕ ದೇಗುಲ ಹಿಂಭಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.
ಮೆರವಣಿಗೆ ಮತ್ತು ಅಂತ್ಯಕ್ರಿಯೆ ಮುಗಿಯುವವರೆಗೂ ಮರಿ ಮಂಗ ತಾಯಿಯನ್ನು ಬಿಟ್ಟು ಕದಲಿಲ್ಲ. ಈ ದೃಶ್ಯ ಕಂಡ ಪ್ರತಿಯೊಬ್ಬರೂ ಕಣ್ಣೀರು ಹಾಕಿದರು. ಅಂತ್ಯಕ್ರಿಯೆ ಸಮಯದಲ್ಲಂತೂ ಮರಿ ಮಂಗ ಅಮ್ಮನನ್ನು ಬಿಡಲೇ ಇಲ್ಲ. ಗ್ರಾಮಸ್ಥರು ಎಷ್ಟೇ ದೂರ ಸರಿಸಿದರೂ ಮತ್ತೆ ಮತ್ತೆ ಬರುತ್ತಿತ್ತು. ಕೊನೆಯದಾಗಿ ಒತ್ತಾಯಪೂರ್ವಕವಾಗಿ ಮರಿಯನ್ನು ಎತ್ತಿಕೊಂಡು ಬಂದು ಮನೆಯಲ್ಲಿ ಆರೈಕೆ ಮಾಡುತ್ತಿದ್ದಾರೆ. ಸ್ವಲ್ಪ ಸುಧಾರಿಸಿಕೊಂಡ ಬಳಿ ಅರಣ್ಯ ಅಥವಾ ಅರಣ್ಯ ಇಲಾಖೆಗೆ ಒಪ್ಪಿಸುವುದಾಗಿ ಹಳ್ಳಿಗರು ತಿಳಿಸಿದ್ದಾರೆ.
ಪ್ರಮುಖರಾದ ನಿಂಗನಗೌಡ ಪಾಟೀಲ್, ಶಾಂತಗೌಡ, ಅರವಿಂದಗೌಡ, ಬಸವರಾಜ ಬಳಬಟ್ಟಿ, ಸುರೇಶ ಮ¯್ಲÉÃದ, ಓಂಪ್ರಕಾಶ ದುದ್ದಗಿ, ಶಿವಶರಣ ಮೈಲಾಪುರ, ಈರಣ್ಣ ಮಡಿವಾಳಕರ, ಮುರ್ತಜಾ ಅವಟಿ, ನಬಿ ಗೋಲಗೇರಿ, ಸೈಫನ್‌ಶಾ ನಾಯ್ಕೋಡಿ, ಶಿವಪ್ಪ ಭಂಡಾರಿ ಇತರರಿದ್ದರು.