ಅಮೃತಭಾರತೀ ವೈಭವಂ

9sri-2 (1) web
Published on

ಶೃಂಗೇರಿ: ಮೆಣಸೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ರಾಜೀವ್​ಗಾಂಧಿ ಪರಿಸರದ ಅಮೃತಭಾರತೀ ವೈಭವಂ ಕಾರ್ಯಕ್ರಮವನ್ನು ಮಂಗಳವಾರ ಗುರುನಿವಾಸದಲ್ಲಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ನೆರವೇರಿಸಿದರು. ಬಳಿಕ ವಾಕ್ಯಾರ್ಥ ಭಾರತೀ ಹಾಗೂ ಶಾರದಾ ಪತ್ರಿಕೆಗಳ ವಾರ್ಷಿಕ ಸಂಚಿಕೆ ಲೋಕಾರ್ಪಣೆಗೊಳಿಸಿದರು.

ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಮಾತನಾಡಿ, ಸಂಸ್ಕೃತ ಭಾಷೆ ಎಲ್ಲ ಜ್ಞಾನಕ್ಕೂ ಮೂಲ ಭಾಷೆ. ಸಂಸ್ಕೃತದ ಹಲವಾರು ಗ್ರಂಥಗಳು ಅನೇಕ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿವೆ. ಮೂಲ ಭಾಷೆಯಾದ ಸಂಸ್ಕೃತದಲ್ಲಿ ಅಧ್ಯಯನ ಮಾಡಿದಾಗ ಗ್ರಂಥಗಳ ಪರಿಪೂರ್ಣವಾದ ವಾಸ್ತವ ಅರ್ಥ ತಿಳಿಯಲ್ಪಡುತ್ತದೆ. ಎಲ್ಲರೂ ಸಂಸ್ಕೃತ ಭಾಷೆಗೆ ಆದ್ಯತೆ ನೀಡಬೇಕು. ಭಾಷೆಗೆ ಪ್ರಾಮುಖ್ಯತೆ ನೀಡಿದಾಗ ಮಾತ್ರ ಅದರ ಮೌಲ್ಯತೆ ಬೆಳೆವಣಿಗೆ ಆಗಲು ಸಾಧ್ಯ ಎಂದರು.

ಕಾಲೇಜಿನ ವಿದ್ಯಾರ್ಥಿಗಳು ರಾಜಗೋಪುರ ಮುಂಭಾಗದಲ್ಲಿ ಸಂಸ್ಕೃತ ಭಾಷೆಯ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net