

ರಾಮನಗರ: ಜಿಲ್ಲೆಯ ಜಲಮೂಲಗಳ ಅಭಿವೃದ್ಧಿಗೆ ಆಜಾದಿ ಕಾ ಅಮೃತ ಸರೋವರ ಯೋಜನೆ ಅಂಗವಾಗಿ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಪಡಿಸುವ ಅಭಿಯಾನಕ್ಕೆ ಜಿಲ್ಲಾ ಪಂಚಾಯಿತಿ ಮುಂದಾಗಿದೆ.
ಇದರ ಅಂಗವಾಗಿ ಜಿಲ್ಲೆಯ ಒಟ್ಟು 75 ಕೆರೆಗಳನ್ನು ಆಯ್ಕೆ ಮಾಡಲಾಗಿದ್ದು, ಮೊದಲಿಗೆ ನಾಲ್ಕು ತಾಲೂಕುಗಳ 15 ಕೆರೆಗಳು ಅಭಿವೃದ್ಧಿಯಾಗಲಿವೆ.
75ನೇ ಸ್ವಾತಂತ್ರೊ$್ಯತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಲಮೂಲಗಳ ಸಂರಕ್ಷಣೆ, ಅಂತರ್ಜಲ ಮಟ್ಟ ಹೆಚ್ಚಳ, ಕೆರೆ&ಕಟ್ಟೆಗಳ ಸಂರಕ್ಷಣೆಗಾಗಿ ಕೆರೆಗಳ ಪುನಶ್ಚೇತನಕ್ಕೆ ಮುಂದಾಗಿದೆ. ಅದರಂತೆ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲಿ 75 ಕೆರೆಗಳನ್ನು ನಿರ್ಮಿಸುವ ಗುರಿ ನೀಡಿದೆ. ಜಿಲ್ಲೆಯಲ್ಲಿ ಈಗಾಗಲೇ ಕೆರೆಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಆಗಸ್ಟ್ 15ರೊಳಗೆ ಕನಿಷ್ಠ ಅಮೃತ ಸರೋವರಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಹಂತ ಹಂತವಾಗಿ ಉಳಿದ 60 ಕೆರೆಗಳ ನಿರ್ಮಾಣವೂ ಆಗಲಿದೆ. ಈ ಯೋಜನೆಯಲ್ಲಿ ನಡೆಯುವ ಕಾಮಗಾರಿಯನ್ನು ಸಂಪೂರ್ಣವಾಗಿ ಉದ್ಯೋಗ ಖಾತ್ರಿ ಯೋಜನೆಯಲ್ಲಿಯೇ ಕೈಗೊಳ್ಳುವುದರಿಂದ ಕೂಲಿ ಕಾರ್ಮಿಕರಿಗೆ ಉದ್ಯೋಗ ಅವಕಾಶ ದೊರೆಯಲಿದೆ.
ಏನೇನು ಕಾಮಗಾರಿ?: ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿರುವ ಕೆರೆಗಳಲ್ಲಿ ಹೂಳು ತೆಗೆಯುವುದು, ಕೆರೆಯ ತೂಬು ನವೀಕರಿಸುವುದು, ಕೆರೆ ಸುತ್ತಲೂ ತಂತಿ ಬೇಲಿ ಅಳವಡಿಕೆ, ಕೆರೆಗೆ ನೀರು ಸುಗಮವಾಗಿ ಹರಿದು ಬರಲು ಸುತ್ತಲಿನ ನಾಲೆಗಳ ಸುಧಾರಣೆ, ಕೆರೆಯ ದಂಡೆ ಮೇಲಿನ ದಾರಿ ಅಭಿವೃದ್ಧಿ, ಕೆರೆಯ ಸುತ್ತ ಸಸಿಗಳನ್ನು ನೆಡುವುದು, ಕೆರೆಯ ದಂಡೆಯ ಮೇಲೆ ಉದ್ಯಾನವನ, ಆಸನ ವ್ಯವಸ್ಥೆ, ಪಾದಚಾರಿಗಳಿಗೆ ವಾಕಿಂಗ್ ಪಥ ನಿರ್ಮಾಣ ಸೇರಿ ಹಲವು ಕಾಮಗಾರಿಗಳನ್ನು ಒಳಗೊಂಡಿರುತ್ತವೆ. ಅಮೃತ ಸರೋವರ ನರೇಗಾ ಯೋಜನೆ ಮತ್ತು ಸಿಎಸ್ಆರ್ ಅನುದಾನ ಒಗ್ಗೂಡಿಸಿಕೊಂಡು ಗ್ರಾಮೀಣ ಭಾಗದ ಕೆರೆಗಳನ್ನು ಹೈಟೆಕ್ ಮಾಡಬಹುದಾಗಿದೆ.
ಅಮೃತ ಸರೋವರ ಯೋಜನೆಯಡಿ ರಾಮನಗರ ಜಿಲ್ಲೆಯಲ್ಲಿ ನರೇಗಾ ಮೂಲಕ ದೀರ್ಕಾಲದ ಬಾಳಿಕೆಗಾಗಿ 75 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೆಲವು ಕಡೆ ಕೆರೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಇದರಿಂದ ಜಲ ಸಂರಕ್ಷಣೆ, ಅಂತರ್ಜಲ ವೃದ್ಧಿ ಜತೆಗೆ ಪರಿಸರ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ದಿಗ್ವಿಜಯ್ ಬೋಡ್ಕೆ, ಸಿಇಒ, ರಾಮನಗರ ಜಿಪಂ
ಅಮೃತ ಸರೋವರ ಯೋಜನೆಯಲ್ಲಿ ನರೇಗಾ ಯೋಜನೆ ಮೂಲಕ ಕೆರೆಗಳ ಅಭಿವೃದ್ಧಿಗೆ ಅವಕಾಶವಿದೆ. ಅಭಿವೃದ್ಧಿಪಡಿಸಿದ ಬಳಿಕ ಆಯಾ ಪ್ರದೇಶದ ಜನರು ಕೆರೆಗಳ ಬಗ್ಗೆ ರ್ನಿಲಕ್ಷ$್ಯಬಿಟ್ಟು ಆಸಕ್ತಿ ತೋರಬೇಕಿದೆ. ಅಂತರ್ಜಲ ಹೆಚ್ಚಳದ ಮೂಲಕ ಕೃಷಿಗೆ ಮಾತ್ರವಲ್ಲದೆ ಜೀವ ಸಂಕುಲಗಳ ದಾಹ ನೀಗಿಸಲು ಸಹ ಪೂರಕವಾಗಲಿದೆ. ಕೆರೆಗಳ ಅಭಿವೃದ್ಧಿ ಮತ್ತು ರಕ್ಷಣೆಗೆ ಎಲ್ಲರೂ ಪಣತೊಡಬೇಕು. ಟಿ.ಕೆ.ರಮೇಶ್, ಜಿಪಂ ಉಪ ಕಾರ್ಯದರ್ಶಿ, ರಾಮನಗರ