

ಮೈಸೂರು: ಅಮೃತ ವಿಶ್ವವಿದ್ಯಾಪೀಠಂನ ಮೈಸೂರು ಕ್ಯಾಂಪಸ್‌ನಲ್ಲಿ ಸ್ಕೂಲ್ ಆಫ್ ಬ್ಯುಸಿನೆಸ್‌ಅನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಯಿತು. ಸೋಮವಾರ ನಡೆದ ಶುಭಾರಂಭ ಕಾರ್ಯಕ್ರಮದಲ್ಲಿ ಪ್ರಥಮ ಎಂಬಿಎ ತರಗತಿಗಳನ್ನು ಉದ್ಘಾಟಿಸಲಾಯಿತು.
ಬೆಂಗಳೂರಿನ ಹಿಟಾಚಿ ಗ್ರೂಪ್ ಕಂಪನಿಯ ಗ್ಲೋಬಲ್ ಲಾಜಿಕ್‌ನ ಕಾರ್ಪೊರೇಟ್ ಉಪಾಧ್ಯಕ್ಷೆ ಅಶ್ವಿನಿ ನಂದಿನಿ ಮಾತನಾಡಿ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮಹತ್ವವನ್ನು ವಿವರಿಸಿದರು.
ವಿದ್ಯಾರ್ಥಿಗಳು ದೊಡ್ಡ ಕನಸು ಕಾಣುವುದರ ಜತೆಗೆ ಕೌಶಲ ಹೆಚ್ಚಿಸಿಕೊಳ್ಳಬೇಕು. ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಹೊಂದಿಕೊಳ್ಳುವಿಕೆ, ಕುತೂಹಲ ಮತ್ತು ನಿರಂತರ ಕಲಿಕೆಯು ಬಹು ಮುಖ್ಯವಾದ ಪಾತ್ರ ವಹಿಸುತ್ತದೆ.
ನಿಜವಾದ ಯಶಸ್ಸು ಜೀವನದಲ್ಲಿ ಉತ್ಸಾಹ, ಉದ್ದೇಶ ಮತ್ತು ಸಮತೋಲನದಿಂದ ಬರುತ್ತದೆ ಎಂದು ಹೇಳಿದರು.
ಅಮೃತ ವಿಶ್ವವಿದ್ಯಾಪೀಠಂನ ಶೈಕ್ಷಣಿಕ ಶ್ರೇಷ್ಠತೆ ಮತ್ತು ಆಧ್ಯಾತ್ಮಿಕ ನೆಲೆಯ ಮಿಶ್ರಣವು ವೃತ್ತಿಪರರನ್ನು ಮಾತ್ರವಲ್ಲದೆ ಸಹಾನುಭೂತಿಯುಳ್ಳ ಮನುಷ್ಯರನ್ನು ಸೃಷ್ಟಿಸುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನ ಇನ್ಫೋಸಿಸ್‌ನ ಅಸೋಸಿಯೇಟ್ ಉಪಾಧ್ಯಕ್ಷ ಮತ್ತು ಜಾಗತಿಕ ಮುಖ್ಯಸ್ಥ ಜಿ.ವೇಣುಗೋಪಾಲ್ ಮಾತನಾಡಿ, ವಿದ್ಯಾರ್ಥಿಗಳು ಎಂಬಿಎ ಶಿಕ್ಷಣವನ್ನು ಕೇವಲ ಶೈಕ್ಷಣಿಕ ದೃಷ್ಟಿಯಿಂದ ನೋಡದೆ ಬದಲಾಗುತ್ತಿರುವ ಜಗತ್ತಿಗೆ ಅದನ್ನು ಅನ್ವಯಿಸುವ ಬಗೆಯನ್ನು ಕಲಿತುಕೊಳ್ಳಬೇಕು. ಸೃಜನಶೀಲತೆ ಮತ್ತು ಅಂತಃಪ್ರಜ್ಞೆಯ ಮೂಲಕ ಕಲಿಯುವುದು, ಕಲಿತದ್ದನ್ನು ಬಿಟ್ಟು ಮತ್ತೆ ಕಲಿಯುವುದು ಬಹಳ ಮುಖ್ಯವಾಗುತ್ತದೆ ಎಂದರು.
ಯಶಸ್ಸು ಗಳಿಸಬೇಕಾದರೆ ಅನೇಕ ವಿಷಯಗಳಲ್ಲಿ ಪ್ರಜ್ಞಾಪೂರ್ವಕವಾಗಿ ರಾಜಿ ಮಾಡುಕೊಳ್ಳಬೇಕಾಗುತ್ತದೆ. ನಿರ್ವಹಣೆಯು ಸವಾಲು ಸ್ವೀಕರಿಸುವುದು, ಸಂಘರ್ಷಗಳನ್ನು ಧನಾತ್ಮಕವಾಗಿ ನೋಡುವುದು ಮತ್ತು ಸಮಸ್ಯೆ-ಪರಿಹರಿಸುವ ಕೌಶಲ ಅಭಿವೃದ್ಧಿಪಡಿಸುವುದಾಗಿದೆ ಎಂದರು.
ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರ ಹಿರಿಯ ಶಿಷ್ಯರಾದ ಸ್ವಾಮಿ ಆತ್ಮಾನಂದ ಪುರಿ ಮಾತನಾಡಿ, ಯಶಸ್ಸು ಎಂಬುದು ಒಂದು ಸ್ಥಿತಿಯಲ್ಲ, ಸವಾಲು ಎದುರಿಸುವ, ಸ್ವಾಗತಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯವಾಗಿದೆ. ವಿದ್ಯಾರ್ಥಿಗಳು ಉತ್ಸಾಹ, ಪ್ರತಿಭೆ, ಸಾಮಾಜಿಕ ಅಗತ್ಯ, ಜೀವನೋಪಾಯ ಕಂಡುಕೊಳ್ಳುವ ಹಾಗೂ ಸವಾಲು ಬೇಧಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.
ವಕೀಲ ಒ.ಶಾಮಭಟ್ ಮಾತನಾಡಿ, ವಿದ್ಯಾರ್ಥಿಗಳು ತರಗತಿಗಳನ್ನೂ ಮೀರಿ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಮೃತ ಮೈಸೂರಿನ ನಿರ್ದೇಶಕ ಬ್ರಹ್ಮಚಾರಿ ಅನಂತಾನಂದ ಚೈತನ್ಯ, ಸಂಚಾಲಕ ಮುಕ್ತಿಧಾಮೃತ ಚೈತನ್ಯ, ಅಸೋಸಿಯೇಟ್ ಡೀನ್ ಪ್ರೊ.ಶೇಖರ್ ಬಾಬು, ಪ್ರಾಂಶುಪಾಲ ಡಾ.ಜಿ.ರವೀಂದ್ರನಾಥ್ ಹಾಗೂ ಶೈಕ್ಷಣಿಕ ಸಂಯೋಜಕಿ ಡಾ. ರೇಖಾ ಭಟ್ ಇದ್ದರು.
ಫೋಟೋ (ಆ.18, ಸ್ಕಾೃನ್-24)
ಅಮೃತ ವಿಶ್ವವಿದ್ಯಾಪೀಠಂನ ಮೈಸೂರು ಕ್ಯಾಂಪಸ್‌ನಲ್ಲಿ ಸೋಮವಾರ ‘ಸ್ಕೂಲ್ ಆಫ್ ಬ್ಯುಸಿನೆಸ್’ ವಿಭಾಗವನ್ನು ಸ್ವಾಮಿ ಆತ್ಮಾನಂದ ಪುರಿ ಉದ್ಘಾಟಿಸಿದರು. ಅಶ್ವಿನಿ ನಂದಿನಿ, ಜಿ.ವೇಣುಗೋಪಾಲ್, ಒ. ಶಾಮಭಟ್ ಇತರರು ಇದ್ದರು.