ಅಮೃತ ಮಹೋತ್ಸವ ಸಡಗರದಿಂದ ಆಚರಿಸಿ

BJP
Published on


ಯಾದಗಿರಿ: ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಜನತೆ ಈ ಬಾರಿ ಸ್ವಾತಂತ್ರ್ಯ ದಿನವನ್ನು ಹಬ್ಬದ ರೀತಿ ಆಚರಣೆ ಮಾಡುವಂತೆ ಶಾಸಕ ವೆಂಕಟರಡ್ಡಿ ಮುದ್ನಾಳ್ ಕರೆ ನೀಡಿದರು.


ಭಾನುವಾರ ಕರೆದಿದ್ದ ಮನೆ ಮನೆಯಲ್ಲೂ ತಿರಂಗ ಅಭಿಯಾನದ ಸಭೆಯಲ್ಲಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷದ ಸಂಭ್ರಮದಲ್ಲಿ ಭಾರತೀಯರಿದ್ದಾರೆ. ಹೀಗಾಗಿ ಜನತೆ ಸ್ವಾತಂತ್ರ ದಿನವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಬೇಕು. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ತಿರಂಗಾ ಹಾರಿಸಬೇಕು ಎಂದು ಸಲಹೆ ನೀಡಿದರು.

ಆ.13 ರಂದು ಬೆಳಗ್ಗೆ 10 ಗಂಟೆಗೆ ನಗರದ ಮೈಲಾಪುರ ಅಗಸಿಯಿಂದ ಬೈಕ್ ರ್ಯಾಲಿ ಜಾಥಾಕ್ಕೆ ಜಾಲನೆ ನೀಡಲಾಗುವುದು. ಯಾದಗಿರಿ ಮತಕ್ಷೇತ್ರದ ಪ್ರತಿ ಬೂತ್ಗೆ 100 ರಾಷ್ಟ್ರಧ್ವಜಗಳನ್ನು ವಿತರಸಲಾಗುವುದು. ಒಟ್ಟು 20,000 ಕ್ಕೂ ಹೆಚ್ಚು ತ್ರೀವರ್ಣ ಧ್ವಜ ವಿತರಣೆ ಮಾಡಲಾಗುವುದು. ಜಿಲ್ಲೆಯ ಪ್ರತಿಯೊಬ್ಬ ಭಾರತೀಯ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಾಡಲು ಪ್ರತಿಯೊಬ್ಬರ ಕಾರ್ಯಕರ್ತರು ಶ್ರಮವಹಿಸಿ ಕಾರ್ಯಕ್ರಮ ಯಶ್ವಸಿಗೊಳಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಗುವುದು. ದೇಶದಲ್ಲಿ 30 ಕೋಟಿ ಮನೆಗಳ ಮೇಲೆ ಧ್ವಜ ರಾರಾಜಿಸಬೇಕು ಎಂಬ ಕನಸು ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದೆ. ಪ್ರತಿಯೊಬ್ಬರಲ್ಲೂ ದೇಶಭಕ್ತಿ ಜಾಗೃತವಾಗಲಿ ಎಂಬ ಉದ್ದೇಶ ಪ್ರಧಾನಿಗಳು ಹೊಂದಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net