ಅಮೃತ ಮಹೋತ್ಸವ ಶಿಲುಬೆಗೆ ಸ್ವಾಗತ

3LNG01
Published on

ಲಿಂಗಸುಗೂರು: ಬಳ್ಳಾರಿ ಧರ್ಮಕ್ಷೇತ್ರದ ಅಮೃತ ಮಹೋತ್ಸವ ಶಿಲುಬೆಯನ್ನು ಪಟ್ಟಣದ ಲೂರ್ದು ಮಾತೆ ಚರ್ಚ್‌ನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ನ.27 ಮತ್ತು 28 ರಂದು ಬಳ್ಳಾರಿ ಧರ್ಮಕ್ಷೇತ್ರದ ಅಮೃತ ಮಹೋತ್ಸ ಸಮಾರಂಭದ ಪೂರ್ವಭಾವಿಯಾಗಿ ಧರ್ಮಕ್ಷೇತ್ರ ವ್ಯಾಪ್ತಿಯ ರಾಯಚೂರು ಕೊಪ್ಪಳ, ಬಳ್ಳಾರಿ, ವಿಜಯಪುರ, ವಿಜಯನಗರ ಜಿಲ್ಲೆಗಳ ಧರ್ಮಕೇಂದ್ರಗಳಿಗೆ ಅಮೃತ ಮಹೋತ್ಸವದ ಶಿಲುಬೆ ಸಂಚರಿಸುತ್ತಿದೆ. ಗುರುಗುಂಟಾ, ಹಟ್ಟಿ, ಚಿಕ್ಕಹೆಸರೂರು ಮೂಲಕ ಶುಕ್ರವಾರ ಸಂಜೆ ಲಿಂಗಸುಗೂರಿಗೆ ಆಗಮಿಸಿದ ಅಮೃತ ಮಹೋತ್ಸವದ ಶಿಲುಬೆಯನ್ನು ಲೂರ್ದು ಮಾತೆ ಚರ್ಚ್‌ನ ವಿಚಾರಣೆ ಗುರು ಫಾ.ಜೋಸ್ ಪ್ರಕಾಶ್ ಹೂ ಮಾಲೆ ಹಾಕಿ ಸ್ವಾಗತಿಸಿದರು.

ಚರ್ಚ್‌ನ ಪಾಲನಾ ಸಮಿತಿ ಕಾರ್ಯದರ್ಶಿ ಅಮರೇಶ ಘಂಟಿ, ಸದಸ್ಯರಾದ ಮೇಷಕ, ಶಾಂತಪ್ಪ, ಪ್ರಾಂಚೀಸ್ ಕುಮಾರ್, ಮೇರಿ, ಕವಿತಾ, ಪ್ರಕಾಶಮ್ಮ, ಸಿಸ್ಟರ್ ಅರುಣಾ, ರೆನ್ನ ಡಿಸೋಜಾ, ರಾಯಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net