

ಬೈಲಕುಪ್ಪೆ: ಅಮೃತ ಜ್ಯೋತಿ ಯೋಜನೆ ಅಡಿಯಲ್ಲಿ ಸಿಗುವ ಸವಲತ್ತುಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸೆಸ್ಕ್ ಪ್ರಭಾರ ಸಹಾಯಕ ಕಾರ್ಯಪಾಲಕ ಸುನಿಲ್‌ಯಾದವ್ ಸಲಹೆ ನೀಡಿದರು.
ಪಿರಿಯಾಪಟ್ಟಣದ ಬೈಲಕುಪ್ಪೆ ಗ್ರಾಪಂ ವ್ಯಾಪ್ತಿಯ ಮಂಚದೇವನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯುತ್ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ.75ರಷ್ಟು ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದ್ದು, ತಮ್ಮ ಆಧಾರ್ ಕಾರ್ಡ್, ಜಾತಿ ದೃಢೀಕರಣ ದಾಖಲಾತಿ ನಕಲು ಸಲ್ಲಿಸಿ, ವಿದ್ಯುತ್ ಸಂಪರ್ಕ ಪಡೆಯಬಹುದು ಎಂದರು.
ಬೈಲಕುಪ್ಪೆ ಗ್ರಾಪಂ ಸದಸ್ಯ ಎಂ.ಎಂ.ಸುರೇಶ್ ಮಾತನಾಡಿದರು. ಗ್ರಾಮದ ಮುಖಂಡರಾದ ಮಂಜುನಾಥ, ವೆಂಕಟೇಶ್, ರಾಜಶೇಖರ್, ಹರೀಶ್, ಸ್ವಾಮಿ, ತಮ್ಮಣ್ಣ, ನರಸಿಂಹ ನಾಯಕ, ಸೆಸ್ಕ್ ಸಿಬ್ಬಂದಿ ನಾಗರಾಜು, ಧರಣೇಶ್, ಬಸವರಾಜು, ಕುಮಾರ್, ಇತರರಿದ್ದರು.