ಅಮುಲ್​ ಉತ್ಪನ್ನಗಳನ್ನು ಎಸದು ಕರವೇ ಪ್ರತಿಭಟನೆ

11GDG08
Published on

ಗದಗ:
ರಾಜ್ಯದಲ್ಲಿ ಅಮುಲ್​ ಉತ್ಪನ್ನಗಳ ಮಾರಾಟ ನಿಷೇಧಿಸಲು ಆಗ್ರಹಿಸಿ ನಗರದ ಗಾಂಧಿ ವೃತ್ತದಲ್ಲಿ ಕರ್ನಾಟಕ ರಣಾ ವೇದಿಕೆ ಜಿಲ್ಲಾ ಟಕದ ವತಿಯಿಂದ ಅಮುಲ್​ ಉತ್ಪನ್ನಗಳನ್ನು ರಸ್ತೆಗೆ ಎಸೆದು, ಭಾವಚಿತ್ರಗಳಿಗೆ ಬೆಂಕಿ ಹಚ್ಚುವ ಮೂಲಕ ಮಂಗಳವಾರ ಪ್ರತಿಭಟನೆ ಮಾಡಲಾಯಿತು.
ಕರವೇ ಜಿಲ್ಲಾ ಅಧ್ಯ ಶರಣು ಗೋಡಿ ಮಾತನಾಡಿ, ಅಮುಲ್​ ಸಂಸ್ಥೆ ಕನ್ನಡಿಗರ ಭಾವನೆ ಜೊತೆ ಆಟ ಆಡುತ್ತಿದೆ. ಅಮುಲ್​ ಹಾಲು, ಮೊಸರು, ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ. ಕನ್ನಡಿಗರ ಕಟ್ಟಿದ ಹೆಮ್ಮೆಯ ಸಂಸ್ಥೆ ಕೆಎಂಎ್​ ನಂದಿನಿ ಬ್ರಾಂಡ್​ ಕನ್ನಡಿಗರ ಆಸ್ಮಿತೆಯಾಗಿದ್ದು, ಅದನ್ನು ನಾಶಪಡಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಯುವ ಟಕದ ಅಧ್ಯ ನಿಂಗನಗೌಡ ಮಾಲಿಪಾಟೀಲ್​, ಜಿಲ್ಲಾ ಉಪಾಧ್ಯ ಹನುಮಂತ ಪೂಜಾರ, ಯುವ ಟಕದ ಜಿಲ್ಲಾ ಉಪಾಧ್ಯ ಮಾರುತಿ ಈಳಗೇರ, ರಾಮನಗೌಡ ಹಳಿಮನಿ, ಕಿಲ್ಲೆದಾರ್​, ಮಹಾದೇವಿ ದೊಡ್ಡಗೌಡ್ರು, ಹುಸೇನ ಅಕ್ಕಿ, ಪವನ್​ ಕರಿನಾಯ್ಕರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net