ಅಮಿತ್ ಷಾ ರಾಜೀನಾಮೆ ನೀಡಲಿ

26SND-01
Published on

ಸಿಂಧನೂರು: ರಾಜ್ಯಸಭೆ ಕಲಾಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿರುವುದನ್ನು ಖಂಡಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟ ನಗರದ ಎಪಿಎಂಸಿ ಗಣೇಶ ದೇವಸ್ಥಾನದಿಂದ ತಹಸಿಲ್ ಕಚೇರಿವರೆಗೆ ವಿದ್ಯಾರ್ಥಿಗಳೊಂದಿಗೆ ಗುರುವಾರ ಪ್ರತಿಭಟನೆ ನಡೆಸಿತು.

ತಹಸಿಲ್ ಕಚೇರಿವರೆಗೆ ನಡೆದ ರ‌್ಯಾಲಿಯಲ್ಲಿ ಜನಪರ ಸಂಘಟನೆಗಳು, ದಲಿತ-ದಮನಿತ, ಶೋಷಿತ ಸಮುದಾಯದ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿ, ಯುವಜನರು ಘೋಷಣೆ ಕೂಗಿದರು. ಅಮಿತ್ ಷಾ ಅವರು ಅಂಬೇಡ್ಕರ್ ಕುರಿತು ಹಿಯಾಳಿಕೆಯ ಮಾತನಾಡಿರುವುದು ಬಿಜೆಪಿಯ ಮನುವಾದದ ಮನಸ್ಥಿತಿಯನ್ನು ಬಹಿರಂಗಗೊಳಿಸಿದೆ ಎಂದು ದೂರಿದರು.

ಸಂವಿಧಾನ ಮತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ಮುಂದಿಟ್ಟುಕೊಂಡು, ದೇಶದ ದಲಿತ-ದಮನಿತ ಸಮುದಾಯಗಳು, ಕಾರ್ಮಿಕರು, ರೈತರು, ವಿದ್ಯಾರ್ಥಿ-ಯುವಜನರು ಹಾಗೂ ಬಿಜೆಪಿಯ ಜನದ್ರೋಹಿ ಕಾಯ್ದೆ, ಕಾನೂನುಗಳನ್ನು ವಿರೋಧಿಸುತ್ತಿರುವುದರಿಂದ ಹತಾಶೆಗೊಂಡಿರುವ ಗೃಹ ಸಚಿವ ಅಮಿತ್ ಷಾ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಏಳು ಜನ್ಮಗಳ ಸ್ವರ್ಗಕ್ಕಾಗಿ ಅಮಿತ್ ಷಾ ಅವರು ದಿನವೂ ಜಪ ಮಾಡಲಿ. ಆದರೆ, ಸಂವಿಧಾನದಡಿ ಪ್ರಮಾಣ ವಚನ ಸ್ವೀಕರಿಸಿ, ಸಂವಿಧಾನ ನಿರ್ಮಾತೃ ಬಗ್ಗೆ ಅವಹೇಳನ ಮಾಡಿರುವ ಹಿನ್ನೆಲೆಯಲ್ಲಿ ಅಮಿತ್ ಷಾ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ಹುಸೇನಸಾಬ, ವೆಂಕನಗೌಡ ಗದ್ರಟಗಿ, ನಿರುಪಾದಿ, ಶೇಖರಪ್ಪ ಧುಮತಿ, ಪರಶುರಾಮ ಭಂಡಾರಿ, ಡಿ.ಎಚ್.ಕಂಬಳಿ, ಮಹಾದೇವ ಧುಮತಿ, ಹಾಜಿಸಾಬ ಆಯನೂರು, ಮೌನೇಶ ಜಾಲವಾಡಗಿ, ಶಂಕರ ಗುರಿಕಾರ, ಬಿ.ಎನ್.ಯರದಿಹಾಳ, ಲಿಯಾಖತ್ ಅಹಮದ್, ಖಾಜಿ ಜಾವಿದ್, ಚಾಂದ್ ಪಾಷಾ ಟೇಲರ್, ಚಿದಾನಂದಪ್ಪ ವಕೀಲ, ಬಸವರಾಜ ಎಕ್ಕಿ, ಅಬ್ದುಲ್ ಸಮದ್ ಚೌದ್ರಿ, ಕರೇಗೌಡ ಕುರುಕುಂದಾ, ವೀರಭದ್ರಗೌಡ ಅಮರಾಪುರ, ಶರಣಪ್ಪ ಟೆಂಗಿನಕಾಯಿ, ಹುಸೇನ್ ಸಾಬ್, ಡಾ.ವಸಿಮ್ ಅಹಮದ್, ಚಂದ್ರಶೇಖರ್ ಗೊರೇಬಾಳ, ತಾಯಪ್ಪ, ಬಸವರಾಜ ಬಾದರ್ಲಿ, ಕೃಷ್ಣಮೂರ್ತಿ ಧುಮತಿ, ಬಸವರಾಜ ಹಳ್ಳಿ, ಬಸವರಾಜ ಎಕ್ಕಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net