ಅಮಿತ ಕೋರೆಗೆ ರಾಷ್ಟ್ರೀಯ ಪ್ರಶಸ್ತಿ

25Ckd3 - Copy
Published on

ಚಿಕ್ಕೋಡಿ: ಹೊಸದೆಹಲಿಯಲ್ಲಿ ಜು. 24ರಿಂದ 26ರ ವರೆಗೆ ಹಮ್ಮಿಕೊಂಡಿದ್ದ ಭಾರತೀಯ ಸಕ್ಕರೆ ತಂತ್ರರ ಸಂಸ್ಥೆಯ 83ನೇ ಶತಮಾನೋತ್ಸವ ವಾರ್ಷಿಕ ಸಮಾವೇಶ ಮತ್ತು ಅಂತಾರಾಷ್ಟ್ರೀಯ ಸಕ್ಕರೆ ಪ್ರದರ್ಶನದಲ್ಲಿ ಸಮಾರಂಭದಲ್ಲಿ ಸಿ.ಬಿ.ಕೋರೆ ಕಾರ್ಖಾನೆಯ ನಿರ್ದೇಶಕ ಅಮಿತ ಪ್ರಭಾಕರ ಕೋರೆ ಅವರಿಗೆ ಸಕ್ಕರೆ ಉದ್ಯಮಿಯ ಶ್ರೇಷ್ಠತೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.

ಅಮಿತ ಪ್ರಭಾಕರ ಕೋರೆ ಅವರು ಸಕ್ಕರೆ ಉದ್ಯಮದಲ್ಲಿ ನಿರ್ವಹಿಸಿದ ತಾಂತ್ರಿಕ ಅನುಭವ ಮತ್ತು ಕಾರ್ಯ ಪರಿಗಣಿಸಿ 24ರಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಕ್ಕರೆ ಉದ್ಯಮದ ಏಳಿಗೆಗೆ ನಡೆಸಿದ ಅವರ ಸತತ ಪ್ರಯತ್ನಕ್ಕೆ ದೊರಕಿದ ಗೌರವವಾಗಿದೆ ಎಂದು ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರು, ರೈತರು ಹರ್ಷ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net