ಅಮಾಯಕರಿಗೆ ಹಿಂಸೆ ನೀಡುವುದು ಸಲ್ಲ

bkt-15-6
ಬಾಗಲಕೋಟೆ ಜಿಲ್ಲಾಡಳಿತ ಭವನ ಎದುರು ಕೆರೂರಿನ ಮಹಿಳೆಯರು ಕಣ್ಣೀರು ಹಾಕಿ ಪ್ರತಿಭಟನೆ ನಡೆಸಿದರು.
Published on

ಬಾಗಲಕೋಟೆ: ಬಾದಾಮಿ ತಾಲೂಕಿನ ಕೆರೂರಿನಲ್ಲಿ ಇತ್ತೀಚಿಗೆ ಗಣಪತಿ ವಿಸರ್ಜನೆಯ ವೇಳೆ ಹಿಂದೂ ಸಂಘಟನೆಯ ಮುಖಂಡ ಸೇರಿ ಅಮಾಯಕ ಏಳು ಜನರನ್ನು ಬಂಸಿ ಚಿತ್ರ ಹಿಂಸೆ ನೀಡಿದೆ ಬಾದಾಮಿ ಸಿಪಿಐ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಕ್ರೋಶ ಹೊರ ಹಾಕಿದ ಕಣ್ಣೀರಟ್ಟ ಘಟನೆ ಜಿಲ್ಲಾಡಳಿತ ಭವನ ಎದುರು ಗುರುವಾರ ನಡೆಯಿತು.
ಬಂತರ ತಾಯಂದಿರು, ಮಕ್ಕಳು ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಬಾದಾಮಿ ಸಿಪಿಐ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ನಮ್ಮ ಮಕ್ಕಳಿಗೆ ರಕ್ಷಣೆ ನೀಡಿ, ಅಮಾಯಕ ಮಕ್ಕಳನ್ನು ಬಂಧಿಸಿ ಹಿಂಸೆ ನೀಡುವುದು ಸಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಜಿಲ್ಲಾಡಳಿತ ಮೂಲಕ ಮನವಿ ಸಲ್ಲಿಸಿದರು.
ಜಯಶ್ರೀ ದಾಸಮನಿ ಮಾತನಾಡಿ, ಕೆರೂರಿನಲ್ಲಿ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವಾಗ ಹಿಂದೂ ಸಂಘಟನೆಯ ಶರಣಬಸವ ಸಜ್ಜನ ಸೇರಿ 7 ಜನ ಅಮಾಯಕರನ್ನು ಪೊಲೀಸರು ವಶಕ್ಕೆ ಪಡೆದು ಹಿಂಸೆ ನೀಡಿದ್ದಾರೆ. ನೀರು ಕೇಳಿದರೆ ಬೂಟು ಇಟ್ಟು ಹೊಡೆದಿದ್ದಾರೆ. ಇಂತಹ ಅಧಿಕಾರಿ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಗಣೇಶ ವಿಸರ್ಜನೆಯ ವೇಳೆ ನಮ್ಮ ಮಕ್ಕಳು ಡ್ಯಾನ್ಸ್ ಮಾಡುತ್ತಿರುವಾಗ ಏಕಾಏಕಿ ಬಂದ ಸಿಪಿಐ ತಾವೇ ಗಾಯ ಮಾಡಿಕೊಂಡಿದ್ದಾರೆ. ಅದನ್ನೆ ನೆಪವಾಗಿಟ್ಟುಕೊಂಡು ಮನೆಯಲ್ಲಿದ್ದ ಮಕ್ಕಳನ್ನು ಹಿಡಿದುಕೊಂಡು ಹೋಗಿ ಹಿಂಸೆ ನೀಡಲಾಗುತ್ತಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸದೇ ಪೊಲೀಸ್ ಠಾಣೆಯಲ್ಲಿ ಇಟ್ಟು ಮನಬಂದಂತೆ ಥಳಿಸಿದ್ದಾರೆ. ಕಾನೂನು ಪಾಲನೆ ಮಾಡುವವರೇ ಈ ರೀತಿ ಮಕ್ಕಳ ಮೇಲೆ ವರ್ತಿಸಿದರೇ ಸಮಾಜದಲ್ಲಿ ಬದುಕುವುದು ಹೇಗೆ. ಹಿಂದು ಸಂಘಟನೆ ಮಾಡುವುದು ತಪ್ಪಾ ಅಂತ ಪ್ರಶ್ನಿಸಿ ಎಂದು ಕಣ್ಣೀರು ಇಟ್ಟರು.
ಈ ಸಂದರ್ಭದಲ್ಲಿ ಮಹಾದೇವಿ ಮರೆಗುದ್ದಿ, ಶಂಕ್ರವ್ವ ಆಲೂರ, ಗೀತಾ ಬೀಳಗಿ, ಸುವರ್ಣ ಪಟ್ಟಣಶೆಟ್ಟಿ, ಸಾವಿತ್ರಿ ಬಾದವಾಡಗಿ, ಶಂಕ್ರವ್ವ ಬೈಲಪ್ಪನವರ, ಗೀತಾ ಬುಳ್ಳಾ, ಗೌರವ್ವ ತೋಟನ್ನವರ, ನಿರ್ಮಲ ಕತ್ತಿ, ಮಹಾದೇವಿ ಛತ್ರಿ ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net