ಅಮಾಯಕರಿಗೆ ಕಿರುಕುಳ ನೀಡಬೇಡಿ: ಮೀರಜ್ ಪಾಷ

ಅಮಾಯಕರಿಗೆ ಕಿರುಕುಳ ನೀಡಬೇಡಿ: ಮೀರಜ್ ಪಾಷ
Published on

ಹಾಸನ: ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸರು ನಗರದ ಎಪಿಜೆ ಅಬ್ದುಲ್ ಕಲಾಂ ರಸ್ತೆ, ಪೆನ್ಶನ್ ಮೊಹಲ್ಲಾ, ಅಮೀರ್ ಮೊಹಲ್ಲಾ ಸೇರಿದಂತೆ ವಿವಿಧೆಡೆ ರೌಡಿ ಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿರುವುದು ಶ್ಲಾಘನೀಯ ಎಂದು ಯಂಗ್ ಇಂಡಿಯಾ ಯೂಥ್ ಆರ್ಗನೈಜೆಷನ್ ಅಧ್ಯಕ್ಷ ಮೀರಜ್ ಪಾಷ ಹೇಳಿದರು.

ಪೆನ್ಶನ್ ಮೊಹಲ್ಲಾ ಪೊಲೀಸರು ದಾಳಿ ವೇಳೆ ರೌಡಿ ಶೀಟರ್‌ಗಳ ಜತೆಗೆ ಕೂಲಿ ಕೆಲಸ ಮಾಡಿಕೊಂಡು ರಸ್ತೆ ಬದಿ ಇರುವ ಟೀ ಕ್ಯಾಂಟೀನ್‌ಗಳಲ್ಲಿ ಬಂದು ಕುಳಿತಿರುವ ಅಮಾಯಕರನ್ನು ಎಳೆದುಕೊಂಡು ಹೋಗಿರುವುದು ವಿಷಾದನೀಯ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಪೊಲೀಸರ ಕಾರ್ಯ ಶ್ಲಾಘನೀಯ. ಆದರೆ ಆರೋಪಿಗಳಿಗೆ ಬಲೆ ಬೀಸುವ ಭರದಲ್ಲಿ ಅಮಾಯಕರಿಗೆ ನೀಡುವ ಕಿರುಕುಳದಿಂದ ಅವರ ಕುಟುಂಬ ಸದಸ್ಯರಲ್ಲಿ ಭಯದ ವಾತಾವರಣ ಸೃಷ್ಟಿಯಗಿದೆ. ಮುಂದಿನ ದಿನಗಳಲ್ಲಿ ಪೊಲೀಸರು ದಾಳಿ ಮಾಡುವ ಮೊದಲು ಖಚಿತ ಮಾಹಿತಿ ಆಧರಿಸಿ ನಿಜವಾದ ಆರೋಪಿಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಬೇಕು. ಅಮಾಯಕರಿಗೆ ಯಾವುದೇ ಕಿರುಕುಳ ಆಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಈ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net