ಅಮಾಯಕ ದಲಿತ ವ್ಯಕ್ತಿ ಮೇಲೆ ಪೊಲೀಸರ ಮಾರಣಾಂತಿಕ ಹಲ್ಲೆ!..

ಅಮಾಯಕ ದಲಿತ ವ್ಯಕ್ತಿ ಮೇಲೆ ಪೊಲೀಸರ ಮಾರಣಾಂತಿಕ ಹಲ್ಲೆ!..
Published on

ಹಾಸನ : ಅಮಾಯಕ ದಲಿತ ವ್ಯಕ್ತಿ ಶೇಖರ್ ಎಂಬುವರ ಮೇಲೆ ಕರ್ತವ್ಯ ನಿರತ ಪೊಲೀಸರು ಮದ್ಯ ಸೇವಿಸಿ ಮಾರಣಾಂತಿಕ ಹಲ್ಲೆ ನಡೆಸಿ ಗುಂಡಾಗಿರಿ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಜೈ ಭೀಮ್ ಬ್ರಿಗೇಡ್ ಸಂಘಟನಾ ಸಮಿತಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.

ಶೇಖರ್ ಎಂಬುವರು ನಗರದ ಚನ್ನಪಟ್ಟಣ ಬಡಾವಣೆಯಲ್ಲಿ ವಾಸವಾಗಿದ್ದು ಜ. 5ರಂದು ರಾತ್ರಿ ಸುಮಾರು 10.30ರ ಸಮಯದಲ್ಲಿ ನಗರ ಕಟ್ಟಿನಕೆರೆ ತರಕಾರಿ ಮಾರ್ಕೆಟ್ ಕಡೆಯಿಂದ ಮನೆಗೆ ಹೋಗುವಾಗ ಹಾಸನ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಎ.ಎಸ್.ಐ. ಹರೀಶ್ ಹಾಗೂ ಅವರ ತಂಡ ಆತನ ಮೇಲೆ ಸುಖಾ ಸುಮ್ಮನೆ ಕಳ್ಳತನದ ಆರೋಪ ಹೊರೆಸಿ, ಜಾತಿ ನಿಂದನೆ ಮಾಡಿ ಏಕಾಏಕಿ ಮಾರಾಣಾಂತಿಕ ಹಲ್ಲೆ ನಡೆಸಿದ್ದು ಪರಿಣಾಮ ಅವರ ದೇಹಕ್ಕೆ ಹಾನಿಹಾಗಿ ಕೈ ಮೂಳೆ ಮುರಿದೆದೆ ಆದರೆ ಈ ಘಟನೆ ನಡೆದು ಸುಮಾರು 10 ರಿಂದ 15 ದಿನಗಳು ಕಳೆಯುತ್ತಾ ಬಂದರೂ ಪೊಲೀಸ್ ಇಲಾಖೆ ಯಾವುದೇ ಪ್ರಕರಣ ದಾಖಲಿಸಿಕೊಡಿಲ್ಲ ಎಂದು ಆರೋಪಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಘಟನೆ ಬಗ್ಗೆ ಮಾಹಿತಿ ಇದ್ದರೂ ಕೂಡ ಮೌನವನ್ನುವಹಿಸಿದ್ದು ಅವರು ಕೂಡಲೆ ಎಚ್ಚೆತ್ತು ಹಲ್ಲೆ ನಡೆಸಿ ಸಿಬ್ಬಂದಿಗಳ ಮೇಲೆ ಆಟ್ರಾಸಿಟಿ ಕಾಯ್ದೆಯಡಿ ಎಫ್.ಐ.ಆರ್. ಪ್ರಕರಣ ದಾಖಲಿಸಿ, ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಹಾಗೂ ಪೊಲೀಸ್ ಇಲಾಖೆಯಿಂದ ಸಂತ್ರಸ್ತ ವ್ಯಕ್ತಿಗೆ ಹತ್ತು ಲಕ್ಷ ಪರಿಹಾರ ಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜೈ ಭೀಮ್ ಬ್ರಿಗೇಡ್ ಸಂಘಟನೆ ಹಾಗೂ ಅನೇಕ ದಂಲಿತಪರ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಛೇರಿಯನ್ನು ಮುತ್ತಿಗೆ ಹಾಕಿ ಪ್ರತಿಭಟಸಲಾಗುವು ಎಂದು ಎಚ್ಚರಿಸಿದರು.

ಜೈ ಭೀಮ್ ಬ್ರಿಗೇಡ್‌ಸಂಘಟನಾ ಸಮಿತಿಯ ಜಿಲ್ಲಾಧ್ಯಕ್ಷ ರಾಜೇಶ್, ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net