ಅಮಾನತ್ತು ಆದೇಶ ರದ್ದು

Published on

ಚಾಮರಾಜನಗರ: ಬಹುಜನ ಸಮಾಜ ಪಕ್ಷದ ಶಿಸ್ತು ಮತ್ತು ಶಿಷ್ಟಾಚಾರ ಉಲ್ಲಂಘನೆಯ ಕಾರಣಕ್ಕೆ ಪಕ್ಷದಿಂದ ಅಮಾನತ್ತು ಮಾಡಲಾಗಿದ್ದ ರವಿಮೌರ್ಯ, ವಾಸು ಹೊಂಡರಬಾಳು ಹಾಗೂ ಎಸ್.ಪಿ.ಮಹೇಶ್ ಅವರ ಅಮಾನತ್ತು ಹಾಗೂ ಉಚ್ಛಾಟನೆ ಆದೇಶವನ್ನು ರದ್ದುಗೊಳಿಸಲಾಗಿದೆ.

ಪಕ್ಷದ ರಾಜ್ಯ ಶಿಸ್ತುಪಾಲನಾ ಸಮಿತಿ ಮುಂದೆ ಅಹವಾಲು ಸಲ್ಲಿಸಿ ತಪ್ಪಿನ ಅರಿವನ್ನು ಅರ್ಥಮಾಡಿಕೊಂಡು ಮುಂದಿನ ದಿನಗಳಲ್ಲಿ ಪಕ್ಷದ ಆಂತರಿಕ ಶಿಸ್ತು ಮತ್ತು ಶಿಷ್ಟಾಚಾರಕ್ಕೆ ಒಳಪಟ್ಟು ಕಾರ್ಯನಿರ್ವಹಿಸುವುದಾಗಿ ಒಪ್ಪಿಕೊಂಡಿರುವುದರಿಂದ ಅವರ ಅಮಾನತ್ತು ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಬ.ಮ.ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net