ಅಮಾನತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ

CTD G.H.MOHANKUMARA
Published on

ಚಿತ್ರದುರ್ಗ: ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಸೋಮಶೇಖರ್ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಬಿಜೆಪಿ ಜಿಲ್ಲಾ ಕಾರ‌್ಯದರ್ಶಿ ಜಿ.ಎಚ್.ಮೋಹನ್‌ಕುಮಾರ್ ಅವರು ರಾಜ್ಯಪಾಲ ಥಾವರ್‌ಚಂದ್ ಗೆಹೋಲ ತ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕೇಂದ್ರದಲ್ಲಿ ಕಳೆದ ಆ.17ರಂದು ಒಳಮೀಸಲು ಕುರಿತ ವಿಚಾರಗೋಷ್ಠಿಯನ್ನು,ಆಯೋಜಕರು ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪಿನ ವಿರುದ್ಧ ಅಭಿಪ್ರಾಯ ರೂಪಿಸಲು ಬಳಸಿಕೊಂಡಿದ್ದಾರೆ. ಗೋಷ್ಠಿಯಲ್ಲಿ ವಿಚಾರ ಪ್ರತಿ ಪಾದಿಸಿದವರು ಒಳಮೀಸಲನ್ನು ವಿರೋಧಿಸಿಕೊಂಡು ಬಂದವರೇ ಆಗಿದ್ದಾರೆ.
ಹೈದರಾಬಾದ್ ಡಾ.ವೈ.ಚಿನ್ನಾರಾವ್,ಚೆನ್ನೈ ಪ್ರೊ.ಎಲ್ ಜವಹರ್‌ನೀಸಸ್ ಅವರು ಒಳಮೀಸಲು ವಿರೋಧಿ ಚಿಂತಕರಾಗಿದ್ದು,ಇತರ ಆಹ್ವಾನಿ ತ ರೂ ಸುತ್ತಿ ಬಳಸಿ ಒಳ ಮೀಸಲು ವಿರೋಧಿಸುವವರೇ ಆಗಿದ್ದಾರೆ. ಒಳ ಮೀಸಲಿಗಾಗಿ ಮಾದಿಗ ಸಮುದಾಯ 3 ದಶಕಗಳಿಂದ ಕರ್ನಾಟಕದ ಲ್ಲಿ ಹೋರಾಟ ಮುನ್ನಡೆಸುತ್ತಿದೆ.ಮಾದಿಗ ಸಮಾಜದ ಒಬ್ಬ ಪ್ರಾಧ್ಯಾಪಕ,ಚಿಂತಕರನ್ನೂ ಕರೆಯದೇ ಗೋಷ್ಠಿ ಆಯೋಜಿಸಿರುವುದರ ಹಿಂದೆ ರಾ ಜಕೀಯ ಚಿತಾವಣೆ ಕಾಣಿಸುತ್ತದೆ.
ಕೇಂದ್ರದ ನಿರ್ದೇಶಕ ಡಾ.ಜೆ ಸೋಮಶೇಖರ್ ಪ್ರಾರಂಭಿಕ ಮಾತುಗಳು ಏನನ್ನು ಸೂಚಿಸುತ್ತವೆ?ಸುಪ್ರೀಂಕೋರ್ಟ್ ಏಳು ಸದಸ್ಯರ ಸಂವಿಧಾ ನ ಪೀಠದ ಬಗ್ಗೆ ಸರ್ಕಾರಿ ಖರ್ಚಿನಲ್ಲಿ ಏಕಪಕ್ಷೀಯವಾಗಿ ಗೋಷ್ಠಿಗಳನ್ನು ಆಯೋಜಿಸುವುದು ಸರಿಯೇ?ಪರಿಶಿಷ್ಟ ಜಾತಿಗಳನ್ನು ಎತ್ತಿಕಟ್ಟುವ ಉ ಸಾಬರಿ ಬೇಕಿತ್ತೇ?ಬಾಬಾಸಾಹೇಬರ ಸಹಬಾಳ್ವೆ ಆಶಯ ಮುಗಿಸುವ,ಸುಪ್ರೀಂ ಕೋರ್ಟ್‌ಗೆ ಅಗೌರವ ತೋರಿಸುವಂತಹ ಪ್ರಕ್ರಿಯೆಗಳು ಮುಂ ದೆ ನಡೆಯದಂತೆ ಸೋಮಶೇಖರ್ ವಿರುದ್ಧ ಶಿಸ್ತು ಕ್ರಮ ಜರುಗಿಸ ಬೇಕೆಂದು ಮೋಹನ್‌ಕುಮಾರ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net