ಅಮರ್ ಜವಾನ್ ಸ್ಮಾರಕಕ್ಕೆ ಪುಷ್ಪ ನಮನ

21 vtp 1 Yodhara stamba
ಅಮರ್ ಜವಾನ್ ಸ್ಮಾರಕಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕಂಡ್ರತಂಡ ಸುಬ್ಬಯ್ಯ ಪುಷ್ಪ ನಮನ ಸಲ್ಲಿಸಿದರು.
Published on

ವಿರಾಜಪೇಟೆ: ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘದ ಮಹಾಸಭೆಯ ಅಂಗವಾಗಿ ಅಮರ್ ಜವಾನ್ ಸ್ಮಾರಕಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕಂಡ್ರತಂಡ ಸುಬ್ಬಯ್ಯ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದರು.

ಎನ್‌ಸಿಸಿ ಕಮಾಂಡೆಂಟ್ ಕರ್ನಲ್ ಜಡ್.ಸಿ.ಅರೋನಾ, ಬ್ರಿಗೇಡಿಯರ್ ಮುನಿಸ್ವಾಮಿ, ಮೇಜರ್ ರಾಮ್‌ರಾವ್, ಕರ್ನಲ್ ಚೆಪ್ಪಡಿರ ಮುತ್ತಣ್ಣ, ಡಿವೈಎಸ್‌ಪಿ ನಿರಂಜನ್‌ರಾಜ್ ಅರಸ್, ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಸ್ವಾಮಿ ಪರಾಮಾನಂದ, ಪುರಸಭೆ ಅಧ್ಯಕ್ಷೆ ಸುಶ್ಮಿತಾ, ಕೊಡವ ಮುಸ್ಲಿಂ ಅಸೋಷಿಯೇಷನ್ ಅಧ್ಯಕ್ಷ ದುದ್ದಿಯಂಡ ಸೂಫಿ, ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚೆಂದ್ರಿಮಾಡ ನಂಜಪ್ಪ, ಉಪಾಧ್ಯಕ್ಷ ಚಪ್ಪಂಡ ಹರೀಶ್, ಮಾಜಿ ಅಧ್ಯಕ್ಷರಾದ ಕಾವಡಿಚಂಡ ಗಣಪತಿ, ಪುಗ್ಗೆರ ನಂದಾ, ತೋರೆರ ಪೂವಯ್ಯ, ಪಟ್ರಪಂಡ ಕರುಂಬಯ್ಯ, ಕೊಡವ ಸಮಾಜ, ಆಟೋ ಚಾಲಕರ ಮತ್ತು ಮಾಲೀಕರ ಸಂಘ, ರೋಟರಿ ಶಾಲೆ, ತ್ರಿವೇಣಿ ಶಾಲೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
ಜಿಲ್ಲಾ ಸಶಸ್ತ್ರ ಪಡೆಯಿಂದ ಮೂರು ಸುತ್ತು ಗುಂಡು ಹಾರಿಸಿ ಅಗಲಿದ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. ಎಸ್‌ಎಂಎಸ್ ಶಾಲಾ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net