ಅಭ್ಯರ್ಥಿಗಳಿಗೆ ಬಹುಮಾನ ವಿತರಣೆ

Spardha Guru Coaching Centre Prize distribution photo
Published on

ಬೀದರ್: ಟಿಇಟಿ ಉಚಿತ ಮಾದರಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಅಭ್ಯರ್ಥಿಗಳಿಗೆ ಇಲ್ಲಿಯ ಕುಂಬಾರವಾಡ ಕಮಾನ್ ಎದುರಿನ ಸ್ಪರ್ಧಾಗುರು ಐಎಎಸ್ ಆ್ಯಂಡ್ ಕೆಎಎಸ್ ಸ್ಟಡಿ ಸೆಂಟರ್‍ನಲ್ಲಿ ನಡೆದ ಟಿಇಟಿ ತರಬೇತಿ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಸೆಂಟರ್‍ನ ನಿರ್ದೇಶಕ ಅಮೀತ್ ಸೋಲಪುರೆ ಮಾತನಾಡಿ, ಜಿಲ್ಲೆಯ ಅಭ್ಯರ್ಥಿಗಳಿಗೆ ನೆರವಾಗಲು ಟಿಇಟಿ ಉಚಿತ ಮಾದರಿ ಪರೀಕ್ಷೆ ಹಾಗೂ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ತರಬೇತಿಯು ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಯಶ ಗಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಶೀಲಾ ಎಸ್. ಬಿರಾದಾರ, ಡಾ. ಅರ್.ಕೆ. ಚಾರಿ, ಮಾಣಿಕರಾವ್ ಪಾಂಚಾಳ ಮಾತನಾಡಿದರು. ಪ್ರಾಚಾರ್ಯ ನಾಗೇಶ ಬಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕರಾದ ಕಾಶೀನಾಥ, ಜಗನ್ನಾಥ ಕಮಲಾಪುರೆ, ಮಿಲಿಂದ ಗುಪ್ತಾ, ಅರ್ಪಣಾ ಎಸ್. ಹಿರೇಮಠ, ವಿನೋದ, ಗೌರೀಶ್ ಬಿರಾದಾರ, ದೇವಿಪ್ರಸಾದ ಕಲಾಲ್, ಸುಧಾಕರ ಮೇತ್ರೆ, ಕೃಷ್ಣ ಚಾರಿ, ಮುರಾರಿ, ಸಚಿನ್ ಸೊರಳ್ಳಿಕರ್ ಇದ್ದರು.
ರಮೇಶ ಮರ್ಜಾಪುರ ನಿರೂಪಿಸಿದರು. ರಾಮಲಿಂಗ ಬಾಳೂರೆ ಸ್ವಾಗತಿಸಿದರು. ಜಗನ್ನಾಥ ಶಿವಗೊಂಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net