ಅಭ್ಯರ್ಥಿಗಳ ವೆಚ್ಚದ ಮೇಲೆ ಹೆಚ್ಚಿನ ನಿಗಾ ವಹಿಸಿ

15 HANUR 3
ಹನೂರಿನ ಚುನಾವಣಾ ಕಚೇರಿಗೆ ಭೇಟಿ ನೀಡಿದ ಚುನಾವಣಾ ವೆಚ್ಚ ವೀಕ್ಷಕ ಅನಿಲ್‌ಗಾಂಧಿ ಪರಿಶೀಲಿಸಿದರು. ಮಧುಸೂದನ್, ಗುರುಪ್ರಸಾದ್, ಮಹದೇವಸ್ವಾಮಿ ಇತರರು ಇದ್ದರು.
Published on

ಹನೂರು: ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಚುನಾವಣಾ ವೆಚ್ಚ ವೀಕ್ಷಕ ಅನಿಲ್‌ಗಾಂಧಿ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಚುನಾವಣಾಧಿಕಾರಿ ಕಚೇರಿಗೆ ಶನಿವಾರ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಯಾವುದೇ ಪಕ್ಷ ಅಥವಾ ಪಕ್ಷೇತರ ಅಭ್ಯರ್ಥಿಗಳು ಸಭೆಗಳನ್ನು ನಡೆಸಲು ಅನುಮತಿ ಪಡೆದಿರುವ ಬಗ್ಗೆ ವಿವಿಟಿ ಹಾಗೂ ವಿಎಸ್‌ಟಿ ತಂಡಗಳಿಗೆ ಮಾಹಿತಿ ನೀಡಬೇಕು. ಇದರಿಂದ ಚುನಾವಣಾ ವೆಚ್ಚದ ಬಗ್ಗೆ ನಿಖರ ಮಾಹಿತಿ ಕಲೆ ಹಾಕಲು ಸಾಧ್ಯವಾಗುತ್ತದೆ. ಚುನಾವಣಾ ಕಾರ್ಯಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ಸಮರ್ಪಕವಾಗಿ ದಾಖಲಿಸಿ ವರದಿ ಸಲ್ಲಿಸಬೇಕು. ಚುನಾವಣಾ ಆಯೋಗದ ನೀತಿ ನಿಯಮಗಳ ಬಗ್ಗೆ ಆಗ್ಗಾಗ್ಗೆ ರಾಜಕೀಯ ಮುಖಂಡರ ಸಭೆ ಕರೆದು ಸಲಹೆ ಸೂಚನೆಗಳನ್ನು ನೀಡಬೇಕು. ಗೊಂದಲವಿದ್ದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಬೇಕು ಎಂದರು.

ಚುನಾವಣಾಧಿಕಾರಿ ಮಧುಸೂದನ್, ಸಹಾಯಕ ಚುನಾವಣಾಧಿಕಾರಿ ಗುರುಪ್ರಸಾದ್, ಶಿರಸ್ತೇದಾರರಾದ ನಾಗೇಂದ್ರ, ಉಮಾ, ನಟರಾಜು, ಆರ್‌ಐ ಮಹದೇವಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net