

ಚಿತ್ರದುರ್ಗ:ಆಂತರಿಕ ಮೀಸಲಾತಿ ಪರ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಅಭೂತ ಪೂರ್ವ ಗೆಲುವು ಎಂದು ಸಂಸದ ಗೋವಿಂದ ಎಂ.ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ. ಈ ತೀರ್ಪು ಸಾಮಾಜಿಕ ನ್ಯಾಯಕ್ಕೆ ನವಶಕ್ತಿ,ಸಂವಿಧಾ ನದ ಆಶಯಕ್ಕೆ ಇನ್ನಷ್ಟು ಬಲ ನೀಡಿದೆ. 7 ಸದಸ್ಯರ ಪೀಠ ಹಿಂದಿನ ತೀರ್ಪನ್ನು ರದ್ದುಗೊಳಿಸುವ ಮೂಲಕ ನಮ್ಮ ಸಂವಿಧಾನ, ಪರಿಶಿಷ್ಟ ಜಾತಿಗಳಲ್ಲಿ ಆಂತರಿಕ ಮೀಸಲಾತಿ ಅನುಮತಿಸುತ್ತದೆ ಎಂದು ಪ್ರಕಟಿಸಿರುವುದು ಹೆಮ್ಮೆಯ ಸಂಗತಿ. ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲು ಸಮರ್ಥನೀಯ ಎಂಬ ಈ ತೀರ್ಪಿನಿಂದಾಗಿ 30 ವರ್ಷಗಳ ನಿರಂತರ ಹೋರಾಟಕ್ಕೆ ಜಯ ದೊರಕಿದೆ ಎಂದಿದ್ದಾರೆ.