

ಔರಾದ್: ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಹಿರಿದಾಗಿದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ ವಯೋ ನಿವೃತ್ತಿ ಹೊಂದಿದ ತಿರುಮಲಾ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರು ಶಿವಾಜಿರಾವ ಪಾಟೀಲ್ ಮುಂಗನಾಳಕರ್ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿವಾಜಿರಾವ ಅವರ ಸುದೀರ್ಘ ಅವಧಿ ಸೇವೆ ಮಾದರಿ. ಮಕ್ಕಳ ಹಿತದ ಜತೆಗೆ ಸಾಮಾಜಿಕ ಕೆಲಸಗಳಲ್ಲೂ ಸಕ್ರಿಯರಾಗಿ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ ಎಂದು ಬಣ್ಣಿಸಿದರು.
ಸನ್ಮಾನ ಸ್ವೀಕರಿಸಿ ಶಿವಾಜಿರಾವ ಪಾಟೀಲ್ ಹಾಗೂ ಹಿರಿಯ ವೈದ್ಯ ಡಾ. ಕಲ್ಲಪ್ಪ ಉಪ್ಪೆ ಮಾತನಾಡಿದರು. ಇದಕ್ಕೂ ಮುನ್ನ ಅಪಾರ ಅಭಿಮಾನಿ ಬಳಗದಿಂದ ಮುಂಗನಾಳಕರ್ ಅವರನ್ನು ಕುದುರೆ ಮೇಲೆ ಸವಾರಿ ಮಾಡಿಸಿ, ಪಟ್ಟಣದ ವಿವಿಧ ವೃತ್ತಗಳ ಮುಖಾಂತರ ಬಾಜಾ, ಭಜಂತ್ರಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಅನೇಕರು ಕುಣಿದು ಕುಪ್ಪಳಿಸಿದರು.
ರಾಮಶೆಟ್ಟಿ ಪನ್ನಾಳೆ, ಅಂಬಿಕಾ ಪವಾರ್, ರಮೇಶ ಉಪಾಸೆ, ರಮೇಶ ದೇವಕತ್ತೆ, ಬಂಡೆಪ್ಪ ಕಂಟೆ, ಪ್ರಕಾಶ ಪಾಟೀಲ್, ಧೋಂಡಿಬಾ ನರೋಟೆ, ಬಾಲಾಜಿ ನರೋಟೆ, ಶಿವಕುಮಾರ ಘಾಟೆ, ಸೂರ್ಯಕಾಂತ ಸಿಂಗೆ, ಪುಂಡಲೀಕರಾವ, ಮನ್ಮಥ ಡೋಳೆ, ಸಂತೋಷ ಪೋಕಲವಾರ್, ಗುರುನಾಥ ವಡ್ಡೆ, ಪಂಢರಿ ಆಡೆ, ಶೇಷರಾವ ಕೋಳಿ, ರಾಜೇಂದ್ರ ಸಿಂಧೆ, ಮಲ್ಲಿಕಾರ್ಜುನ ಹಿಪ್ಪಳಗಾಂವೆ, ಯಾದು ಮೇತ್ರೆ, ದಿಗಂಬರರಾವ ಮಾನಕಾರಿ, ಸಂಜುಕುಮಾರ ಜುಮ್ಮಾ, ಗಜಾನನ ಮಳ್ಳಾ, ಶರಣಪ್ಪ ಚಿಟ್ಮೆ ಇತರರಿದ್ದರು.