ಅಭಿವೃದ್ಧಿಯಲ್ಲಿ ಮಠಗಳ ಕೊಡುಗೆ ಅಪಾರ

2
Published on



ಚಾಮರಾಜನಗರ ; ಸಮಾಜದ ಸ್ವಾಸ್ಥೃ, ಜನರ ಹಿತದೃಷ್ಟಿಯಿಂದ ಮಠಮಾನ್ಯಗಳು ಉತ್ತಮ ಕೆಲಸ ಮಾಡುತ್ತಿವೆ. ಪರಂಪರೆ ಹಾಗೂ ಸಂಸ್ಕೃತಿ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ವಸತಿ ಹಾಗೂ ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಹೇಳಿದರು.


ಗುಂಡ್ಲುಪೇಟೆ ತಾಲೂಕಿನ ಕೊಡಗಾಪುರ ಗ್ರಾಮದಲ್ಲಿ ಶನಿವಾರ ಕಾಡ ಬಸವೇಶ್ವರ ದೇವಾಲಯದ ಮುಖ್ಯದ್ವಾರ ಉದ್ಘಾಟಿಸಿ ಮಾತನಾಡಿದ ಅವರು, ಗುಂಡ್ಲುಪೇಟೆ ತಾಲೂಕು ಮಠ ಮಾನ್ಯಗಳ ತವರೂರು. ರಾಜ್ಯದಲ್ಲಿ ಅತಿ ಹೆಚ್ಚು ಮಠಗಳನ್ನು ಇಲ್ಲಿ ಕಾಣಬಹುದು. ಮಠಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಂದ ಸಮಾಜದ ಅಭಿವೃದ್ಧಿ ಹಿಂದಿನಿಂದಲೂ ನಡೆದಿದೆ. ಮಠಗಳ ಸೇವಾ ಕಾರ್ಯಗಳಿಂದ ಗ್ರಾಮಗಳು ಅಭಿವೃದ್ಧಿಯಾಗಿವೆ ಎಂದು ಅಭಿಪ್ರಾಯಪಟ್ಟರು.


ಶಾಸಕ ಸಿ.ಎಸ್.ನಿರಂಜನಕುಮಾರ್, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ವಿವಿಧ ಮಠಾಧೀಶರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net