

ಕಲಬುರಗಿ: ಕಲ್ಯಾಣ ರ‍್ನಾಟಕ ಭಾಗದಲ್ಲಿ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ಅಭಿವೃದ್ಧಿ ಕರ‍್ಯ, ಜನಪರ ಯೋಜನೆಗಳಿದ್ದು, ಕಲಬುರಗಿ ಒಂದರಲ್ಲೇ ಏಳು ಶಾಸಕರನ್ನು ಹೊಂದಿದ ಇತಿಹಾಸವಿದೆ. ಇದನ್ನು ಬಳಸಿ ಪಕ್ಷದ ಸಂಟಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಜೆಡಿಎಸ್ ಯುವ ಟಕದ ರಾಜ್ಯಾಧ್ಯ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜಿಲ್ಲಾ ಜೆಡಿಎಸ್ ಪದಿಂದ ಹಮ್ಮಿಕೊಂಡ ಕರ‍್ಯರ‍್ತರ ಸಭೆ ಹಾಗೂ ಮಿಸ್ಡ್ ಕಾಲ್ ಮೂಲಕ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಬೇರು ಬಲಿಷ್ಠವಾಗಿದ್ದು, ಪರಿಪರ‍್ಣವಾಗಿ ಚಿಗುರಿಸಬೇಕಿದೆ ಎಂದರು.
ಜೆಡಿಎಸ್ ಹಳೇ ಮೈಸೂರು ಭಾಗಕ್ಕೆ ಸೀಮಿತ ಎಂಬ ತಪ್ಪು ಕಲ್ಪನೆ ಇದೆ. ಅಂದಿಗೂ, ಇಂದಿಗೂ ಶೇ.೫೦ ಜೆಡಿಎಸ್ ಶಾಸಕರು ಉತ್ತರ ರ‍್ನಾಟಕದವರೇ ಆಯ್ಕೆ ಆಗಿ ಬರುತ್ತಾರೆ ಎಂದರು.
ಜೆಡಿಎಸ್ ಮಹಿಳಾ ಟಕದ ಅಧ್ಯೆ ರಶ್ಮಿ ಗೌಡ ಮಾತನಾಡಿ, ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆ ರೂಪಿಸಿದ್ದು, ರ‍್ವಹಿತ ಕಾಪಾಡಲು.ಮಹಿಳೆಯರಿಗೆ ಮೀಸಲಾತಿ ಯೋಚಿಸಿದ್ದು, ದೇವೇಗೌಡರು ಎಂದರು.
ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಜನತಾದಳ ಪಕ್ಷದ ಹೆಬ್ಬಾಗಿಲು ಕಲಬುರಗಿ ಜಿಲ್ಲೆ. ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ನೇರ ಕರ‍್ಖಾನೆ ಕೊಡುವಂತಿಲ್ಲ. ರಾಜ್ಯ ರ‍್ಕಾರ ಪ್ರಸ್ತಾವನೆ ನೀಡದಿದ್ದರೆ, ಸ್ಥಳ ಕೊಡದಿದ್ದರೆ ್ಯಾಕ್ಟರಿ ಆಗಲು ಆಗಲ್ಲ. ರಾಜ್ಯ ರ‍್ಕಾರ ಸ್ಪಂದಿಸುತ್ತಿಲ್ಲ. ಒಗ್ಗಟ್ಟಿನಿಂದ ಸಾಗಿದರೆ ಪಕ್ಷಕ್ಕೆ ಗತವೈಭವ ಬರಲಿದೆ ಎಂದರು.
ಜೆಡಿಎಸ್ ರಾಜ್ಯ ಕರ‍್ಯರ‍್ಶಿ ಶಿವಕುಮಾರ ನಾಟಿಕಾರ್ ಮಾತನಾಡಿ, ಕಲಬುರಗಿಯಲ್ಲಿ ಗುಂಡಾಗಿರಿ, ಶೋಷಿತರ ಮೇಲೆ ದರ‍್ಜನ್ಯ ನಡೆಯುತ್ತಿದೆ. ಕೆಕೆಆರ್ಡಿಬಿಯಿಂದ ಕೋಟ್ಯಂತರ ರೂ. ರ‍್ಚು ಮಾಡಿದರೂ ವ್ರ‍್ಥವಾಗುತ್ತಿದೆ ಎಂದರು.
ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್ ಮಾತನಾಡಿ, ನಮ್ಮ ಭಾಗದ ಜನ ಗುಳೆ ಹೋಗುವುದು ತಪ್ಪಿಸಲು ಕರ‍್ಖಾನೆ ಆರಂಭಿಸಲು ನಿಯೋಗದ ಜತೆ ತೆರಳಿ, ನ್ಯಾಯ ಒದಗಿಸುತ್ತೇವೆ. ಜನರ ಪರದಾಟ ತಪ್ಪಿಸಲು ಜೆಡಿಎಸ್ ಒಂದೇ ಉತ್ತರ ಎಂದರು.
ಪ್ರಮುಖರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಸವರಾಜ ಬಿರಬಿಟ್ಟಿ, ದೇವೇಗೌಡ ತೆಲ್ಲೂರ, ಕೃಷ್ಣಾ ರೆಡ್ಡಿ, ಮಹೇಶ್ವರಿ ವಾಲಿ, ಶಾಮರಾವ ಸೂರನ್, ಮಲ್ಲಿಕರ‍್ಜುನ ಸಂಗಾಣಿ, ದೇವಿಂದ್ರ ಹಸನಾಪುರ, ಮಾಂತಪ್ಪ ಮದರಿ, ಹಣಮಯ್ಯ ಗುತ್ತೇದಾರ, ಮಂಜುನಾಥ ಪಾಟೀಲ್, ರಾಜು ಬಡದಾಳ, ಸುನೀಲ ಅಜಲಪುರ, ಶ್ರೀಕಾಂತ ಪಾಟೀಲ್, ನಾಮದೇವ ಕಾಂಬಳೆ, ಮುಸ್ತಾಕ್ ಅಲಿ, ರಾಜಾ ಪಟೇಲ್, ಪ್ರವಿಣ ಜಾಧವ್, ಅನುರಾಧಾ, ಸುನೀತಾ ಕೋರವಾರ, ಮಹಾನಂದ ಪಡಶೆಟ್ಟಿ, ಅನ್ನಪರ‍್ಣ ಪುರಾಣಿಕ ಇತರರಿದ್ದರು.