ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇನೆ

MUDNAL
Published on

ಯಾದಗಿರಿ: ಕಳೆದ ನಾಲ್ಕು ವರ್ಷಗಳಲ್ಲಿ ಮತಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಜನರ ಬೇಡಿಕೆಯಂತೆ ಅನೇಕ ಕಾಮಗಾರಿ ಕೈಗೊಂಡು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇನೆ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ತಿಳಿಸಿದರು.

ತಾಲೂಕಿನ ಅರಿಕೇರಾ (ಕೆ) ಗ್ರಾಮದಲ್ಲಿ ನರೇಗಾ ಯೋಜನೆಯಡಿ ರಾಜೀವ್ ಗಾಂ ಸೇವಾ ಕೇಂದ್ರ, ಹಾಗೂ ಪ್ರೌಢಶಾಲೆಯಲ್ಲಿ ಅಂದಾಜು 29 ಲಕ್ಷ ರೂ.ವೆಚ್ಚದಲ್ಲಿ ಕೈಗೊಂಡಿರುವ ಭೋಜನಾಲಯ, ಆಟದ ಮೈದಾನ ಉದ್ಘಾಟಿಸಿ ಮಾತನಾಡಿ, ನಾನು ಶಾಸಕನಾಗಿ ಆಯ್ಕೆಯಾದ ನಂತರ ಈ ಶಾಲೆಯನ್ನು ದತ್ತು ತೆಗೆದುಕೊಂಡಿದ್ದೆ. ವಿದ್ಯಾಥರ್ಿಗಳ ವಿಕಾಸಕ್ಕೆ ಅನುಗುಣವಾಗಿ ಗ್ರಾಪಂನವರು ಕೆಲಸ ಮಾಡಿದ ಪರಿಣಾಮ ಈ ಶಾಲೆ ಎಲ್ಲರನ್ನೂ ಆರ್ಕಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೀರಶೈವ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಬಿಜೆಪಿ ಮುಖಂಡ ಶರಣಗೌಡ ಬಾಡಿಯಾಳ ಮಾತನಾಡಿ, ಶಾಸಕರಾಗಿ ಮುದ್ನಾಳ ಆಯ್ಕೆಯಾದ ನಂತರ ಶಿಕ್ಷಣ, ಆರೋಗ್ಯ, ರಸ್ತೆ ನಿಮರ್ಾಣ, ಜನರಿಗೆ ಶುದ್ಧ ಕುಡಿಯುವ ನೀರು, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.

ಬಿಇಒ ಅಮೃತಾಬಾಯಿ, ಗ್ರಾಪಂ ಅಧ್ಯಕ್ಷೆ ಮಹೇಶ್ವರಿ ಹಣಮೇಶ, ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ತಾಪಂ ಅಕಾರಿ ಖಲೀದ್ ಅಹ್ಮದ್, ಬಿಆರ್ಸಿ ಮಲ್ಲಿಕಾಜರ್ುನ ಪೂಜಾರಿ, ಸುರೇಶಗೌಡ, ಬಸ್ಸಪ್ಪ ರಾಠೋಡ್, ಭೋಜಣಗೌಡ, ಮುಖ್ಯಗುರು ಜ್ಯೋತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net