

ತೋರಣಗಟ್ಟಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸದೃಢವಾಗಬೇಕು ಎಂದು ಸರ್ಕಾರದ ಮುಖ್ಯ ಸಚೇತಕ ಶಾಸಕ ಅಶೋಕ ಪಟ್ಟಣ ಹೇಳಿದರು.
ಗ್ರಾಮದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೋರಣಗಟ್ಟಿ ಗ್ರಾಮದ ಸಹಕಾರ ಸಂಘ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರನ್ನು ಆಯ್ಕೆ ಮಾಡಲು ಕಾರ್ಯಕರ್ತರು ಶ್ರಮಿಸಿರುವುದು ಸಂತಸ ತಂದಿದೆ ಎಂದರು.
ಗ್ರಾಮದ ಸಮಗ್ರ ಅಭಿವೃದ್ಧಿ ನಿಮ್ಮೆಲ್ಲರ ಸಹಕಾರ ಅಗತ್ಯ. ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಎನ್.ಶಿಂಗಾರಗೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮಕ್ಕೆ ಪದವಿಪೂರ್ವ ಕಾಲೇಜು, ಪಶು ಚಿಕಿತ್ಸಾಲಯ ಹಾಗೂ ರಸ್ತೆ ಮಂಜೂರು ಮಾಡಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ಗ್ರಾಪಂ ಮತ್ತು ಸಹಕಾರಿ ಸಂಘಗಳಿಂದ ಶಾಸಕರನ್ನು ಸನ್ಮಾನಿಸಲಾಯಿತು. ನೂತನವಾಗಿ ಆಯ್ಕೆಯಾದ ಗ್ರಾಪಂ ಹಾಗೂ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘ ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ, ಸದಸ್ಯರನ್ನು ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಸಮಾರಂಭಕ್ಕೆ ಆಗಮಿಸಿದ ಶಾಸಕರನ್ನು ವಿವಿಧ ವಾದ್ಯಮೇಳ, ಕುಂಭಮೇಳ, ಆರತಿಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಕಟಕೋಳದ ಸಚ್ಚಿದಾನಂದ ಸ್ವಾಮೀಜಿ, ಹರ್ಲಾಪುರದ ನಾಗಭೂಷಣ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಟಿ.ಪಿ.ಮುನ್ನೋಳಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್.ಡವನ, ಎಂ.ಎಂ.ಆತಾರ, ಬಾಪುಸಾಹೇಬ ದೇಸಾಯಿ, ತಮ್ಮೇಶ ಐನಾಪುರ, ಆರ್.ಜಿ.ಸಿಂಗಾರಗೊಪ್ಪ, ರೇವಪ್ಪ ಸಿಂಗರಗೊಪ್ಪ, ಮಲ್ಲಿಕಾರ್ಜುನ ಐನಾಪುರ, ಬಸವರಾಜ ನರಗುಂದ, ವಿಠಲ ಜೋಗಿ, ಬಸವರಾಜ ಐನಾಪುರ, ಲಕ್ಷ್ಮೀ ಮುದಗೊಂಡ, ನೀಲಪ್ಪ ಕಂಬಳಿ, ಸೋಮನಗೌಡ ಮಲಗೌಡ್ರ, ಜಗದೀಶ ಬಿಜಲಿ, ಬಾಳಪ್ಪ ಗುರ್ಲಹೊಸೂರ, ರಾಜು ಮುನವಳ್ಳಿ, ಹೂವಪ್ಪ ಕರ್ಲನ್ನವರ ಇತರರು ಇದ್ದರು.