ಅಭಿವೃದ್ಧಿಗೆ ಸಣ್ಣ ಉದ್ದಿಮೆಗಳ ಕೊಡುಗೆ ಅನನ್ಯ

IMG-20230904-WA0076
Published on

ಯಾದಗಿರಿ: ಯಾವುದೇ ಉದ್ಯಮ ದೊಡ್ಡ ಮಟ್ಟದ ಯಶಸ್ಸು ಸಾಸಬೇಕಾದರೆ ಸಣ್ಣ ಉದ್ದಿಮೆಗಳ ಸಹಕಾರ ಇದ್ದೇ ಇರುತ್ತದೆ. ಹೀಗಾಗಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.


ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಸೋಮವಾರ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಸಿಡ್ಬಿ ಮತ್ತು ಕಾಸಿಯಾದ ಸಹಯೋಗದಲ್ಲಿ ಆಯೋಜಿಸಿದ್ದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತು ಹಾಗೂ ಹಣಕಾಸಿನ ನೆರವು ಕುರಿತ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದ ಸಣ್ಣ ಉದ್ದಿಮೆದಾರರಿಗೆ ಕಾಸಿಯಾ ಸಂಸ್ಥೆ ಸಕರ್ಾರದಿಂದ ಹಲವು ಸೌಲಭ್ಯ ಕಲ್ಪಿಸುವ ಕೆಲಸ ಮಾಡುತ್ತಿದೆ. ಯಾವುದೇ ಉದ್ದಿಮೆ ಆರಂಭಿಸುವ ಮುನ್ನ ಅದರ ಸಾಧಕ-ಬಾದಕಗಳ ಬಗ್ಗೆ ಚಚರ್ೆ ಮಾಡಬೇಕು. ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮೊದಲೇ ಮಾಡಿಕೊಂಡಾಗ ಮಾತ್ರ ಯಶಸ್ಸು ಸಾಸಲು ಸಾಧ್ಯವಿದೆ ಎಂದು ಹೇಳಿದರು.

ಸಕರ್ಾರ ಈಗಾಗಲೇ ಕೈಗಾರಿಕೆ ನೀತಿಯಲ್ಲಿ ತಿಳಿಸಿದಂತೆ ಉದ್ದಿಮೆದಾರರಿಗೆ ಮೂಲಸೌಲಭ್ಯ ಸೇರಿದಂತೆ ಅವರ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಕಾಳಜಿ ವಹಿಸುತ್ತಿದೆ ಎಂದರು.

ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಸಣ್ಣ ಉದ್ದಿಮೆದಾರರಿಗೆ ಬ್ಯಾಂಕ್ಗಳು ಬೇಕಂತಲೇ ತೊಂದರೆ ಕೊಡುವ ಮನೋಭಾವನೆ ಬಿಡಬೇಕು. ಇದರಿಂದ ಅವರು ಆತ್ಮವಿಶ್ವಾಸ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾರೆ. ಸಣ್ಣ ಕೈಗಾರಿಕೆಗಳಿಗೆ ಮಹತ್ವದ ಮಾಹಿತಿ ನೀಡುವ ಕೆಲಸ ಕಾಸಿಯಾ ಕಳೆದ ಹಲವು ದಶಕಗಳಿಂದ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಕಾಸಿಯಾ (ಕನರ್ಾಟಕ ಸಣ್ಣ ಕೈಗಾರಿಕೆಗಳ ಸಂಘ)ದ ಅಧ್ಯಕ್ಷ ಶಶಿಧರ ಶೆಟ್ಟಿ ಮಾತನಾಡಿ, ಮಹತ್ವಾಕಾಂಕ್ಷಿ ಜಿಲ್ಲೆಯಾಗಿರುವ ಯಾದಗಿರಿಯಲ್ಲಿ ಹತ್ತಿ, ಭತ್ತ ಮತ್ತು ಮೆಣಸಿನಕಾಯಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇಲ್ಲಿನ ಹತ್ತಿ ಕೋಲ್ಕತ ಹಾಗೂ ರಾಜಸ್ಥಾನ ರಾಜ್ಯಗಳಿಗೆ ರಫ್ತಾಗುತ್ತದೆ. ಇದರ ಜತೆಗೆ ಜಿಲ್ಲೆಯಲ್ಲಿ ಎಣ್ಣೆ ಕಾಳುಗಳನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ಬೆರೆದು ಬೇರೆ ಬೇರೆ ದೇಶಗಳಿಂದ ಬೇಡಿಕೆ ಇದೆ. ಹೀಗಾಗಿ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ದೃಷ್ಠಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲಾಕಾರಿ ಡಾ.ಸುಶೀಲಾ ಬಿ., ಸಿಡ್ಬಿ ಉಪ ಪ್ರಧಾನ ವ್ಯವಸ್ಥಾಪಕ ಬಿ.ಉಲಗಿಯನ್, ಜಿಲ್ಲಾ ಚೇಂಬರ್ ಆಫ್ ಕಾಮಸರ್್ ಅಧ್ಯಕ್ಷ ದಿನೇಶಕುಮಾರ ಜೈನ್, ಕೈಗಾರಿಕೆ ಇಲಾಖೆ ಜಂಟಿ ನಿದರ್ೇಶಕಿ ರೇಖಾ ಮ್ಯಾಗೇರಿ, ಕಿರಣ್, ರಾಘವೇಂದ್ರ, ಎಚ್.ಕೆ.ಮಲ್ಲೇಶಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net