ಅಭಿವೃದ್ಧಿಗೆ 4.5 ಕೋಟಿ ರೂ. ಮಂಜೂರು

Published on

ಚಿಕ್ಕೋಡಿ, ಬೆಳಗಾವಿ: ತಾಲೂಕಿನ ಕಾಡಾಪುರ ಗ್ರಾಮದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 4.50 ಕೋಟಿ ರೂ.
ಅನುದಾನ ಮಂಜೂರಾಗಿದೆ ಎಂದು ವಿಪ ಸದಸ್ಯ ಪ್ರಕಾಶ ಹುಕ್ಕೇರಿ ತಿಳಿಸಿದರು.

ಕಾಡಾಪುರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮದಿಂದ ಅಂಕಲಿ ಗ್ರಾಮದ ಶಿವಾಲಯದವರೆಗೆ ರಸ್ತೆ ಅಗಲೀಕರಣ ಕಾಮಗಾರಿಗೆ 2 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದರು.

ಕ್ಷೇತ್ರದ ಜನರ ಬೇಡಿಕೆಗೆ ಅನುಗುಣವಾಗಿ ಶಾಸಕ ಗಣೇಶ ಹುಕ್ಕೇರಿ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿದ್ದಾರೆ. ಗ್ರಾಮಸ್ಥರು ಮುಂದೆ ನಿಂತು ಗುಣಮಟ್ಟದ ಬಗ್ಗೆ ನಿಗಾವಹಿಸಬೇಕು ಎಂದರು. ತಾಪಂ ಮಾಜಿ ಸದಸ್ಯ ಪ್ರಕಾಶ ರಾಚನ್ನವರ, ಗ್ರಾಪಂ ಅಧ್ಯಕ್ಷ ಸುಭಾಷ ಸನದಿ, ಸಂಭಾಜಿ ಪವಾರ, ಮಚ್ಚಂದ್ರ ಕಾಡಾಪುರೆ, ಭರತ ಕೋಳೆಕರ, ನಂದಕುಮಾರ ಧರಬಾರೆ, ಶಿವಾಜಿ ಶಿಂಧೆ, ನಂದಕುಮಾರ ಶಿಂಧೆ, ವಿಜಯ ಬಡಿಗೇರ, ಪ್ರಮೋದ ಬಡಿಗೇರ ಇತರರಿದ್ದರು.

ಕಾಡಾಪುರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಚಾಲನೆ ನೀಡಿದರು. ಪ್ರಕಾಶ ರಾಚನ್ನವರ, ಸುಭಾಷ ಸನದಿ, ಸಂಭಾಜಿ ಪವಾರ, ಮಚ್ಚಂದ್ರ ಕಾಡಾಪುರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net