ಬಜೆಟ್‌ನಲ್ಲಿ ಪ್ರಮುಖವಾಗಿ ಉದ್ಯೋಗ, ಕೌಶಲ್ಯಭಿವೃದ್ಧಿ, ಸಣ್ಣ ಕೈಗಾರಿಕೆ ಹಾಗೂ ಕೃಷಿಗೆ ಒತ್ತು ನೀಡಿದ್ದಾರೆ. ಬಜೆಟ್‌ನಲ್ಲಿ ಹಿಂದುಳಿದ ಪ್ರದೇಶಗಳೆಂದು ಬಿಹಾರ ಹಾಗೂ ಆಂಧ್ರಪದೇಶಗಳಿಗೆ ವಿಶೇಷ ಅನುದಾನ ನೀಡಲಾಗಿದೆ. ಆದರೆ, ಕಳೆದ ಹತ್ತು ವರ್ಷದ ಹಿಂದಯೇ ಹಿಂದುಳಿದ ಜಿಲ್ಲೆಗಳೆಂದು ಗುರುತಿಸಲಾಗಿದ್ದ ಈ ಜಿಲ್ಲೆಗಳಿಗೆ ಏಕೆ ವಿಶೇಷ ಅನುದಾನ ನೀಡಿಲ್ಲ. ಮಹಿಳೆಯರಿಗೆ ಹಾಗೂ ಕೃಷಿಕರ ಏಳಿಗಾಗಿ ಇನ್ನೂ ಹೆಚ್ಚಿನ ಯೋಜನೆಗಳು ಜಾರಿ ಮಾಡಿದೆ. ಆದರೆ, ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳಿಗೆ ಈ ಬಜೆಟ್‌ನಲ್ಲಿ ಅನುದಾನ ದೊರೆಯಲಿದೆ ಎಂಬ ಭರವಸೆ ಹುಸಿಯಾಗಿದೆ. ರಸ್ತೆಗಳ ಅಭಿವೃದ್ಧಿ , ಬೃಹತ್ ಕೈಗಾರಿಕರಣಗಳಿಗೆ ಒತ್ತು ಹಾಗೂ ಪ್ರವಾಸ್ಯೋದ್ಯಮಕ್ಕೆ ಅನುದಾನ ನೀಡುವಲ್ಲಿ ಮತ್ತೋಮ್ಮೆ ಹುಸಿ ಮಾಡಿದೆ.
ಅನುಕೂಲಕರ ಬಜೆಟ್
ಈ ಬಜೆಟ್‌ನಲ್ಲಿ ರೈತರ ಏಳಿಗೆಗಾಗಿ ಹೆಚ್ಚಿನ ಅನುದಾನ ನೀಡಲಾಗಿದೆ. ಇದರಿಂದ ಕೃಷಿಕರಿಗೆ ವ್ಯವಸಾಯಕ್ಕೆ ಅನುಕೂಲವಾಗಲಿದೆ. ಮಧ್ಯಮ ವರ್ಗದವರಿಗೂ ಹೊರೆಯಾಗದಂತೆ ಸೂಕ್ತ ರೀತಿಯಲ್ಲಿ ಬಜೆಟ್ ಮಂಡಿಸಲಾಗಿದೆ.
ರಾಜ್ಯಕ್ಕೆ ಕೊಡುಗೆ ಏನಿಲ್ಲ
ಇದೊಂದು ನಿರಾಶಯದಕ ಬಜೆಟ್‌ಯಾಗಿದೆ. ಕಳೆದ ಬಾರಿ ಮಂಡಿಸಿದ ಬಜೆಟ್‌ನಲ್ಲಿನ ಯೋಜನೆಗಳೆ ಪರಿಪೂರ್ಣವಾಗಿಲ್ಲ. ದಕ್ಷಿಣ ಭಾರತದ ಅತಿ ಹೆಚ್ಚು ಸಂಸದರಲ್ಲಿ ರಾಜ್ಯದವರೆ ಹೆಚ್ಚಿದ್ದಾರೆ. ಅದರಲ್ಲಿಯೂ ರಾಜ್ಯದ ಐದು ಸಂಸದರು ಕೇಂದ್ರದಲ್ಲಿ ಮಂತ್ರಿಯಾಗಿದ್ದರು ಕೂಡ ಕೊಡುಗೆ ಏನಿಲ್ಲ. ವಿಶೇಷ ಅನುದಾನ ಪಡೆಯುವಲ್ಲಿ ಆಂಧ್ರಪದೇಶ ಹಾಗೂ ಬಿಹಾರ ರಾಜ್ಯಗಳೆದೆ ಸಿಂಹಪಾಲುಯಾಗಿದೆ.
ಮುಂದಿನ ಪೀಳಿಗೆಗೆ ಅನುಕೂಲ
ದೇಶದ ಹಿತದೃಷ್ಟಿಯಿಂದ ಮಂಡಿಸಿದ ಬಜೆಟ್‌ಯಾಗಿದೆ. ಎಲ್ಲ ರಾಜ್ಯಗಳಿಗೂ ಸರಿಸಮನಾಗಿ ಅನುದಾನ ಹಂಚಿಕೆ ಮಾಡಲಾಗಿದೆ. ಮುಂದಿನ ಪೀಳಿಗೆಗೆ ಅನುಕೂಲಕರವಾಗಿರಲಿದೆ. ರೈತರು ಹಾಗೂ ಯುವಕರಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಹಿಂದುಳಿದ ಪ್ರದೇಶಗಳಿಗೆ ಒತ್ತು
ಹೊಸ ಸರ್ಕಾರದ ಬಜೆಟ್ ಮುಂದಿನ ಐದು ವರ್ಷಗಳಿಗೆ ದಿಕ್ಸೂಚಿಯಾಗಿದೆ. ನಾಲ್ಕು ಪ್ರಮುಖ ಅಂಶಗಳನ್ನು ಇಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಆ ಅಂಶಗಳ ಅನುಷ್ಠಾನಕ್ಕೆ ಒಂಬತ್ತು ಕಾರ್ಯಸೂಚಿಗಳಿಗೆ ಸ್ಪಷ್ಟಗೆ ಅಭಿನಂದನೆ. ಅನುದಾನ ಪಡೆಯುವಲ್ಲಿ ರಾಜ್ಯ ಮತ್ತೋಮ್ಮೆ ಹಿಂದೆ ಬಿದಿದ್ದೆ. ಮೊದಲ ಬಾರಿಗೆ ಹಿಂದುಳಿದ ಪ್ರದೇಶಗಳಿಗೆ ಒತ್ತು ನೀಡುವುದರ ಬಗ್ಗೆ ಬಜೆಟ್‌ನಲ್ಲಿ ಮಂಡಿಸಿರುವುದು ಗಮರ್ನಾಹವಾಗಿದೆ.
ರಾಜ್ಯದ ನಿರೀಕ್ಷೆ ಹುಸಿಯಾಗಿದೆ
ದೇಶದಲ್ಲಿ ಬಜೇಟ್ ಸಾಮಾನ್ಯವಾಗಿ ಎಲ್ಲಾ ಕ್ಷೇತ್ರಗಳಿಗೆ ಉತ್ತಮ ಬಜೇಟ್ ಘೋಷಣೆಯಾಗಿದೆ. ಆಂದ್ರ, ಬಿಹಾರಕ್ಕೆ ವಿಶೇಷವಾಗಿ ಬಜೆಟ್ ಘೋಷಣೆಯಾಗಿದೆ. ಆದರೆ, ರಾಜ್ಯಕ್ಕೆ ರೋಡ್, ಏರ್, ರೈಲ್ವಿನ ಅಭಿವೃದ್ಧಿಗೆ ಒತ್ತು ಕೊಡುವ ನಿರೀಕ್ಷೆ ಹುಸಿಯಾಗಿದೆ.
====
ದೇಶದ ಭವಿಷ್ಯದ ಬಜೆಟ್
ನಮ್ಮ ರಾಜ್ಯಕ್ಕೆ ವಿಶೇಷತೆಯಿಲ್ಲದಿದ್ದರು, 2047ರ ವಿಕಾಸದ ಭಾರತಕ್ಕಾಗಿ ಬೇಕಿರುವ ಎಲ್ಲ ಅಂಶಗಳು ಈ ಬಜೆಟ್ ನಲ್ಲಿದೆ. ಕೃಷಿ ಕ್ಷೇತ್ರ ಸೇರಿದಂತೆ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಈ ಬಜೆಟ್ ಮಂಡನೆಯಾಗಿದೆ.
ಹುಸಿಯಾದ ಮೋದಿ ಗ್ಯಾರಂಟಿ
ಕೇಂದ್ರ ನಿರಾಶಾದಾಯಕ ಬಜೆಟ್ ಇದಾಗಿದೆ. ಇದರಿಂದ ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟವಾಗಿದೆ. ಬಡ ಜನರ, ರೈತ, ಮಹಿಳೆಯರ, ಉದ್ಯೋಗ ಖಾತ್ರಿ ಯೋಜನೆ, ಕೃಷಿ ಕೂಲಿ ಕಾರ್ಮಿಕರಿಗೆ ಅನ್ಯಾಯವಾಗಿದೆ. ರಾಜ್ಯದ ನಾಲ್ಕು ಕೇಂದ್ರ ಸಚಿವರು ಇದ್ದರು ಕೂಡಾ ರಾಜ್ಯಕ್ಕೆ ಏನೂ ಶೂನ್ಯ ಕೊಡುಗೆ.
ಬಜೆಟ್ ನಿರಾಸೆ ಮೂಡಿಸಿದೆ
ಬೃಹತ್ ಕೈಗಾರಿಕೆ ಪ್ರದೇಶದಲ್ಲಿ ಬಳ್ಳಾರಿ ಹಾಗೂ ತೋರಣಗಲ್ಲು ದೊಡ್ಡ ಪ್ರಮಾಣದಲ್ಲಿ ಇದೆ ಅವನ್ನು ಮೇಲ್ದರ್ಜೆಗೆರಿಸಬೇಕಿತ್ತು. ಕೊಟ್ಟೂರಿಂದ ದಾವಣಗೆರೆ ಅತಿ ಹೆಚ್ಚು ರೈಲು ಓಡಾಡುವುದರಿಂದ ಅದಕ್ಕೆ ಹೆಚ್ಚಿನ ಅನುದಾನ ಕಲ್ಪಿಸಬೇಕಿತ್ತು. ಇನ್ನೂ ಗಂಗಾವತಿಯಿಂದ ಸಿರುಗುಪ್ಪಕ್ಕೆ ರೈಲು ಮಾರ್ಗ ಜೋಡಣೆ ಕಾರ್ಯ ವಿಳಂಬವಾಗಿದ್ದು ಅದಕ್ಕೆ ಕೂಡ ಅನುದಾನ ಬಿಡಗಡೆ ಮಾಡಬೇಕಿತ್ತು. ಇದೆಲ್ಲ ಬೇಡಿಕೆ ಈಡೇರದೆ ಹಾಗೂ ಬಳ್ಳಾರಿಗೆ ಕೇಂದ್ರದಿಂದ ಯಾವುದೇ ಅನುದಾನ ದೊರಕದೆ ಇರುವುದು ಜನತೆಗೆ ನಿರಾಸೆ ಉಂಟು ಮಾಡಿದೆ
ಇದೊಂದು ಜನಪರ ಬಜೆಟ್
ಯುವಕರು, ಮಹಿಳೆಯರು, ರೈತರು, ಉದ್ದಿಮೆದಾರರಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ದೇಶದ ಅಭಿವೃದ್ದಿಗೆ ಪೂರಕವಾಗಿದೆ. ಈ ಬಜೆಟ್ ಸ್ವಾಗತಾರ್ಹವಾಗಿದೆ, ಇದು ಜನಪರಬಜೆಟ್ ಆಗಿದೆ.
ಕೃಷಿಗೆ ಒತ್ತು ನೀಡಿಲ್ಲ
ರೈತರಿಗೆ ಸಹಾಯಕವಾಗುವ ಬಜೆಟ್ ಎಂದು ಬಯಸಿದ್ದೆ . ಆದರೆ ರೈತರ ಕೃಷಿಗೆ ಉಪಯೋಗ ಇಲ್ಲದಂತಾಗಿದೆ. ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಡುತ್ತಾರೆಂದು ಬಾವಿಸಿದ್ದೆ ಅದು ಸಹ ಹುಸಿಯಾಗಿದೆ. ಸಾಮಾನ್ಯ ಬಜೆಟ್‌ಯಾಗಿದೆ.
ಮಧ್ಯಮ ವರ್ಗದವರ ವಿರೋಧಿ ಬಜೆಟ್
ಮಧ್ಯಮ ಮತ್ತು ನೌಕರರ ಬಹು ನಿರೀಕ್ಷತೆಯ ಆದಾಯ ತೆರಿಗೆ ಬದಲಾವಣೆ ಮತ್ತೊಮ್ಮೆ ಹುಸಿಯಾಗಿದೆ. ಆದಾಯ ತೆರಿಗೆಯ ಸ್ಟ್ಯಾಂಡರ್ಡ ಡಿಡಕ್ಷನ್ 75,000ಕ್ಕೂ ಸ್ಲಾಬ್ ಗಳಲ್ಲಿ ಬದಲಾವಣೆ ಯಿಂದ ಹೆಚ್ಚಿನ ಉಪಯೋಗವಿಲ್ಲ. ನೌಕರರಿಗೆ ಉದ್ಯೋಗದಾತರು ನೀಡುವ ರಿಯಾಯಿತಿ ಸೌಲಭ್ಯಗಳಿಗೆ 10 ರಿಂದ 15 ಪರ್ಸೆಂಟ್ ತೆರಿಗೆಯನ್ನು ವಿಧಿಸಿ ಮತ್ತೂಂಡೆ ಕಿತ್ತಿಕೊಳ್ಳಲಾಗಿದೆ. 15 ಲಕ್ಷ ಮೇಲಿನ ಆದಾಯಕ್ಕೆ ಶೇಕಡ 30 ತೆರಿಗೆ ಅವೈಜ್ಞಾನಿಕ. ಕಾರ್ಪರೇಟ್ ಕಂಪನಿಗಳಿಗೆ ರಿಯಾಯಿತಿಗಳನ್ನು ಮುಂದುವರೆದಿದ್ದು, ಮತ್ತೊಮ್ಮೆ ಕೇಂದ್ರ ಸರ್ಕಾರ ಕಾರ್ಪೊರೇಟ್ ಪರ ನೌಕರರ, ಮಧ್ಯಮ ವರ್ಗ, ಸಣ್ಣ ಉದ್ಯಮಿಗಳ ವಿರೋಧಿ ಬಜೆಟ್ ಆಗಿದೆ.
ಮಹಿಳೆಯರಿಗೆ ವರದಾನವಾಗಿದೆ
ಮಹಿಳಾ ಸಬಲೀಕರಣಕ್ಕಾಗಿ 3ಲಕ್ಷ ಕೋಟಿ ರೂಪಾಯಿಗಳಷ್ಟು ಅನುದಾನ ಮೀಸಲಿಟ್ಟಿರುವುದು ಸಂತಸ ತಂದಿದೆ. ಉದ್ಯೋಗಸ್ಥ ನಾರಿಯರಿಗೆ ಹಾಸ್ಟೇಲ್ ಸೌಲಭ್ಯ ಕಲ್ಪಿಸುವ ಮೂಲಕ ಭದ್ರತೆ ಒದಗಿಸಿದೆ. ಉದ್ಯೋಗಗಳಲ್ಲಿ ಮಹಿಳೆಯರು ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಿದ್ದು, ಕೃಷಿಗಾಗಿ 1.52ಲಕ್ಷ ಕೋಟಿ ರೂಪಾಯಿಗಳ ಮೀಸಲಿಟ್ಟು, ಸಾವಯವ ಕೃಷಿಗೆ ಒತ್ತು ನೀಡಿದ್ದು ಸ್ವಾಗತಾರ್ಹ. ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ ಸುಂಕ ಇಳಿಕೆಯು ಉತ್ತಮವಾಗಿದೆ.
ವೇತನ ಹೆಚ್ಚಳ ನಿರೀಕ್ಷೆ ಹುಸಿ
ನಿರೀಕ್ಷೆಯಂತೆ ಕೇಂದ್ರ ಸರ್ಕಾರ ಬಿಸಿಯೂಟ ನೌಕರರ ಇಡಗಂಟು ನೀಡಲು ಬಜೆಟ್ ನಲ್ಲಿ ಹಣ ಕಾಯ್ದಿರಿಸಿದೆ ಸ್ವಾಗತಾರ್ಹ. ಆದರೆ ಬಿಸಿಯೂಟ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಿದ್ದರೆ ಇನ್ನೂ ಅನುಕೂಲವಾಗುತ್ತಿತ್ತು.
ಮಹಿಳೆಯರಿಗೆ ಅನುಕೂಲ
ಮಹಿಳೆಯರಿಗೆ ಉದ್ಯೋಗವಕಾಶಗಳನ್ನು ಸೃಷ್ಟಿ ಮಾಡಿರುವ ಬಜೆಟ್ ಇದಾಗಿದೆ. ಮುದ್ರಾ ಯೋಜನೆಯ ಸಾಲದ ಮೊತ್ತವನ್ನು 10 ರಿಂದ 20 ಲಕ್ಷ ಕ್ಕೆ ಏರಿಕೆ ಮಾಡಿದ್ದು. ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆ ಜಾರಿಗೆ ತಂದಿರುವುದರಿಂದ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದೆ.