ಅಭಿವೃದ್ಧಿ ಯೋಜನೆಗಳಿಗೆ ಬೆಂಬಲ

4KMD-1
ಭಾರತೀನಗರ ಜಿ.ಪಂ.ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಡಿ.ಸಿ. ತಮ್ಮಣ್ಣ ಮಾತನಾಡಿದರು. ಮುಖಂಡರಾದ ಬಿಳಿಯಪ್ಪ, ಸ್ವಾಮಿ ಗೌಡ, ಚಿಕ್ಕತಿಮ್ಮೇಗೌಡ, ದೇವರಹಳ್ಳಿ ವೆಂಕಟೇಶ್, ಮರಿಮಾದೇಗೌಡ, ಶಿವಶಂಕರ್, ಪುಟ್ಟಸ್ವಾಮಿ, ವೆಂಕಟೇಶ್ ಇತರರು ಇದ್ದರು.
Published on

ಕೆ.ಎಂ.ದೊಡ್ಡಿ: ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿದ್ದ ಅಭಿವೃದ್ಧಿಯೋಜನೆ ಗಳ ಹಿಂದೆ ನನ್ನ ಪರಿಶ್ರಮ ಸಾಕಷ್ಟು ಇತ್ತು ಎಂದು ಶಾಸಕ ಡಿ.ಸಿ. ತಮ್ಮಣ್ಣ ತಿಳಿಸಿದರು.

ಇಲ್ಲಿನ ಅವರ ನಿವಾಸದ ಆವರಣದಲ್ಲಿ ಭಾರತೀನಗರ ಜಿ.ಪಂ.ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಅವರು, ಬೆಂಗಳೂರು-ಮೈಸೂರು ಹೆದ್ದಾರಿ, ವಿಕಾಸಸೌಧ, ಕಾವೇರಿ ನೀರಾವರಿ ನಿಗಮದ ಕಚೇರಿ ಸೇರಿದಂತೆ ಹಲವು ಜನಪರ ಮತ್ತು ರೈತಪರ ಕೆಲಸಗಳನ್ನು ಮಾಡಿಸಿದ್ದೇನೆ ಎಂದರು.

ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ನನ್ನೊಂದಿಗೆ ಎಲ್ಲ ನಾಯಕರೂ ಸಹಕಾರ ನೀಡಿದ್ದಾರೆ. ಆದ್ದರಿಂದ ಕ್ಷೇತ್ರದಲ್ಲಿ ರಸ್ತೆ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಯೋಜನೆಗಳು ಸಮಗ್ರವಾಗಿ ಜಾರಿಗೆ ಬರಲು ಸಹಕಾರವಾಯಿತು ಎಂದು ತಿಳಿಸಿದರು.

ಗ್ರಾಮೀಣ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರು ಸಹಕರಿಸಬೇಕು. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಶಾಸಕ ತಮ್ಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net