ಅಭಿವೃದ್ಧಿ ಬಿಟ್ಟು ದ್ವೇಷ ರಾಜಕಾರಣ ಮಾಡಲಾರೆ

26NPN3
ನಿಪ್ಪಾಣಿ ತಾಲೂಕಿನ ಅಮಲಝರಿ ಗ್ರಾಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಸಮ್ಮುಖದಲ್ಲಿ ಹಲವರು ಬಿಜೆಪಿಗೆ ಸೇರ್ಪಡೆಗೊಂಡರು. ಮಲಗೊಂಡ ಪಾಟೀಲ, ಸಿದ್ಧು ನರಾಟೆ, ಕಲ್ಪನಾ ತಳಸಕರ ಇದ್ದರು.
Published on

ನಿಪ್ಪಾಣಿ: ನಾವು ದೇಶದಲ್ಲಿ ದ್ವೇಷದ ರಾಜಕಾರಣ ಮಾಡುವುದಿಲ್ಲ. ಬದಲಾಗಿ ಅಭಿವೃದ್ಧಿ ವಿಚಾರವನ್ನಿಟ್ಟು ರಾಜಕಾರಣ ಮಾಡುತ್ತೇವೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ತಾಲೂಕಿನ ಅಮಲಝರಿ ಗ್ರಾಮದಲ್ಲಿ ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಕಾರ್ಯಕರ್ತರನ್ನು ಶಾಲು ಹೊದಿಸಿ ಬರಮಾಡಿಕೊಂಡು ಮಾತನಾಡಿ, ನಾವು ಕೇವಲ ವಿಕಾಸದ ರಾಜಕಾರಣ ಮಾಡುತ್ತಿದ್ದೇವೆ. ಇಂತಹ ರಾಜಕಾರಣಕ್ಕೆ ಒಂದು ಸ್ವರೂಪವಿದೆ. ಪಕ್ಷದ ಅಭಿವೃದ್ಧಿಯ ವಿಚಾರ ಅನೇಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದರು. ಬಿಜೆಪಿಗೆ ಸೇರ್ಪಡೆಗೊಂಡು ಮಾತನಾಡಿದ ಶಿವಾಜಿ ಖೋತ, ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕ್ಷೇತ್ರದಲ್ಲಿ ಜೊಲ್ಲೆ ದಂಪತಿ ಕಾರ್ಯವೈಖರಿ ಮೆಚ್ಚಿ , ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದೇವೆ. ಮೂವತ್ತು ವರ್ಷಗಳಿಂದ ಬಾಕಿ ಉಳಿದಿದ್ದ ಕೆಲಸಗಳನ್ನು ಸಚಿವೆ ಪೂರ್ಣಗೊಳಿಸಲು ಶ್ರಮಿಸಿದ್ದಾರೆ. ಜನರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾದ ರೀತಿ ನೋಡಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ ಎಂದರು. ಬಳಿರಾಮ ಖೋತ, ಸ್ಥಳೀಯ ಹಮಾಲರ ಸಂಘದ ಅಧ್ಯಕ್ಷ ಸುರೇಶ ಕಾಂಬಳೆ, ಜಯವಂತ ಸಾವಳೆ, ಸುಶಾಂತ ಖೋತ, ಸಂದೀಪ ಪಾಟೀಲ, ಸಂಜಯ ಖೋತ, ವಸಂತ ಡಾವಳೆ, ಪಂಡಿತ ಖೋತ, ಹಿಂದೂರಾವ ಕಾಂಬಳೆ, ಸ್ವಪ್ನಿಲ್ ಖೋತ, ವಾಸುದೇವ ಕಾಂಬಳೆ, ಶುಭಂ ಖೋತ, ಮಹಾದೇವ ಕುಂಬಾರ, ಮೊದಲಾದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಮಲಗೊಂಡ ಪಾಟೀಲ, ಸಿದ್ಧರಾಮ ಪೂಜಾರಿ, ಸಿದ್ಧು ನರಾಟೆ, ಗ್ರಾಪಂ ಮಾಜಿ ಅಧ್ಯಕ್ಷೆ ಕಲ್ಪನಾ ತಳಸಕರ, ಪ್ರಕಾಶ ಶಿಂಧೆ, ಸತ್ತು ಗಾವಡೆ, ಸೋಮರಾಯ ಯಮಗರ, ಸೋಮನಾಥ ಕೋಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net