

ಚಿತ್ರದುರ್ಗ:ನಗರದ ಶ್ರೀ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಮೂಲ ಸೌಕರ್ಯ ಒದಗಿಸಿದ ಬಳಿಕ, ಬಳಕೆದಾರಿಗೆ ಮಾರ್ಗ ಸೂಚಿ ಆಧರಿಸಿಶುಲ್ಕ ನಿಗದಿಪಡಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು. ಡಿಸಿ ಕಚೇರಿಯಲ್ಲಿ ಮಂಗಳವಾರ ಜ ರುಗಿದ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯಲ್ಲಿ ಕ್ರೀಡಾಂಗಣದಲ್ಲಿ ಮೂಲ ಸೌಕರ್ಯಗಳನ್ನು ನೀಡದೆ, ಶುಲ್ಕ ವಸೂಲಿ ಸರಿಯಲ್ಲ.
ಸದ್ಯ ಸುಸ್ಥಿತಿಯಲ್ಲಿರುವ ಷಟಲ್ ಬ್ಯಾಡ್ಮಿಂಟನ್,ಜಿಮ್ ಹಾಗೂ ಈಜುಕೊಳಕ್ಕೆ ಶುಲ್ಕ ಸಂಗ್ರಹಿಸುವುದರೊಂದಿಗೆ,ಕ್ರೀಡಾಂಗಣದಲ್ಲಿ ಆಯೋಜಿಸುವ ಕ್ರೀಡಾಕೂಟ ಹಾಗೂ ಶಿಬಿರಗಳಿಗೂ ನಿಯಮಾನುಸಾರ ಶುಲ್ಕ ವಿಧಿಸಬೇಕು. ಈ ಹಿಂದೆ ಜಿಲ್ಲಾ ಕ್ರೀಡಾಂಗಣ ಆಕರ್ಷ ಣೀಯ ಸ್ಥಳವಾಗಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಕ್ರೀಡಾಂಗಣಕ್ಕೆ ಕೆಟ್ಟ ಹೆಸರು ಬಂದಿದೆ. ಸಂಘ ಸಂಸ್ಥೆಗಳ ಸಲಹೆ ಸ್ವೀಕರಿಸಿ, ಕ್ರೀಡಾಂಗಣವನ್ನು ನಿರ್ವಹಿಸುವಂತೆ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಂ.ನೆಲವಗಿ ಅವರಿಗೆ ಡಿಸಿ ನಿರ್ದೇಶಿಸಿದರು.
ಓಬವ್ವ ಕ್ರೀಡಾಂಗಣ ಅಭಿವೃದ್ಧಿಗೆ ಕೆಎಂಇಆರ್‌ಸಿ ಅಡಿ 50 ಕೋಟಿ ರೂ. ಕ್ರಿಯಾಯೋಜನೆಯನ್ನು ಅನುಮೋದನೆಗೆ ನೆಲವಗಿ ತಿಳಿಸಿದರು. ಕೆಎಂಇಆರ್‌ಸಿ ಅಡಿ ಕ್ರೀಡಾಂಗಣದ ಕಟ್ಟಡ ನಿರ್ಮಾಣಕ್ಕೆ ಅನುದಾನ ಕುರಿತು ಮಂಜೂರಾತಿಗೆ ಶಂಕೆ ವ್ಯಕ್ತಪಡಿಸಿದ ಡಿಸಿ,ಸಿಂಥಟಿಕ್ ಟ್ರಾೃಕ್,ಇತರೆ ಕ್ರೀಡಾ ಸಮುಚ್ಚಯಗಳ ನಿರ್ಮಾಣಕ್ಕೆ ಮರು ಕ್ರಿಯಾ ಯೋಜನೆ ರೂಪಿಸಿ ಅನುಮೋದನೆ ಸಲ್ಲಿಸ ಬೇಕು.ಇದರ ಸಿಎಸ್‌ಆರ್ ನಿಧಿಯಡಿ ಕ್ರೀಡಾಂಗಣ ಅಭಿವೃದ್ಧಿ ಪ್ರಯತ್ನಿಸುವುದಾಗಿ ಡಿಸಿ ತಿಳಿಸಿದರು. ಜಿ.ಪಂ.ಸಿಇಒ ಎಸ್.ಜೆ.ಸೋಮಶೇಖರ್, ಎಎಸ್‌ಪಿ ಜೆ.ಕುಮಾರಸ್ವಾಮಿ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ವಾಲಿಬಾಲ್ ತರಬೇತುದಾರ ಮಹಮದ್‌ಮುಹಿಬುಲ್ಲಾ ಮತ್ತಿತರರು ಇದ್ದರು.