ಅಭಿವೃದ್ಧಿ ಬದ್ಧತೆ ಪ್ರದರ್ಶಿಸಿ

tadalapur (2)
Published on

ಬೀದರ್: ದೇಶದ ಪೌರತ್ವ ಪಡೆಯುವ ಜತೆಗೆ ಪ್ರತಿಯೊಬ್ಬರೂ ಪೌರ ಪ್ರಜ್ಞೆ ಬೆಳೆಸಿಕೊಳ್ಳುವುದು ಅವಶ್ಯ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ ಹೇಳಿದರು.

ಕರ್ನಾಟಕ ಶಿಕ್ಷಣ ಕಾಲೇಜಿನಿಂದ ತಾಲೂಕಿನ ತಾದಲಾಪುರದಲ್ಲಿ ಮಂಗಳವಾರ ಹಮ್ಮಿಕೊಂಡ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ದೇಶದ ಪ್ರತಿಯೊಬ್ಬ ನಾಗರಿಕರು ಭಾರತೀಯ ಪೌರತ್ವ ಕಾಯ್ದೆ ಪ್ರಕಾರ ಪೌರತ್ವದ ಗುರುತು ಪಡೆಯುವುದು ಅಗತ್ಯವಿದೆ. ಪೌರತ್ವ ಪಡೆಯುವ ಜತೆಗೆ ಅದಕ್ಕೆ ಪೂರಕವಾಗಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಿ ತಮ್ಮ ಬದ್ಧತೆ ತೋರಿಸಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶಟ್ಟಿ ಮಾತನಾಡಿ, ಪ್ರತಿ ವಿದ್ಯಾರ್ಥಿ ನಾಯಕತ್ವದ ಗುಣಗಳು ಬೆಳೆಸಿಕೊಳ್ಳಬೇಕು. ಇದರ ಜತೆಗೆ ಗ್ರಾಮೀಣ ಭಾಗದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.

ಅಧ್ಯಕ್ಷತೆ ಪ್ರಾಂಶುಪಾಲ ಡಾ.ಸಂತೋಷ ಮೇಳಶಟ್ಟಿ ವಹಿಸಿದ್ದರು. ಕರ್ನಾಟಕ ಪದವಿ ಕಾಲೇಜು ಉಪ ಪ್ರಾಂಶುಪಾಲ ಮಲ್ಲಿಕಾರ್ಜುನ ಹಂಗರಗೆ, ಪ್ರೊ. ಜಗನ್ನಾಥ ಕಮಲಾಪುರೆ, ಶಂಭುಲಿಂಗ ವಾಲ್ದೊಡ್ಡಿ, ಡಾ. ಬಸವರಾಜ ಬಲ್ಲೂರ ಮಾತನಾಡಿದರು. ಉಪನ್ಯಾಸಕರಾದ ಸುಜಾತಾ, ಬನದೇವಿ, ಗ್ರಂಥಪಾಲಕ ದೀಪಕ, ಗಿರೀಶ್ ಇದ್ದರು. ಆರತಿ ಸ್ವಾಗತಿಸಿದರು. ಪಾಂಡುರಂಗ ಕುಂಬಾರ ನಿರೂಪಣೆ ಮಾಡಿದರು. ಶಿವರಾಮಕೃಷ್ಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net