ಅಭಿವೃದ್ಧಿ ಪಥದಲ್ಲಿ ಕೋರೆ ಕಾರ್ಖಾನೆ

15CKD3
Published on

ಚಿಕ್ಕೋಡಿ: ಕಾರ್ಖಾನೆಯು ೧೯೬೯ರಲ್ಲಿ ನೋಂದಣಿಯಾಗಿ ೧೯೭೪ರಲ್ಲಿ ಮೊದಲ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.

ಇಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾತಂತ್ರ‍್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ನವದೆಹಲಿಯ ನಿರ್ದೇಶಕ ಅಮಿತ ಕೋರೆ ಮಾರ್ಗದರ್ಶನದಲ್ಲಿ ಸೂಕ್ತ ನಿರ್ಣಯ, ರೈತರ ಸಹಕಾರ ಹಾಗೂ ಕಾರ್ಮಿಕರ ಸತತ ಪರಿಶ್ರಮದ ಫಲವಾಗಿ ಕಾರ್ಖಾನೆ ೧೦,೦೦೦ ಟಿ.ಸಿ.ಡಿ ಕಬ್ಬು ನುರಿಸುವ ಸಾಮರ್ಥ್ಯ, ೩೧.೭ ಮೆ.ವಾಟ್ ಸಹವಿದ್ಯುತ್ ಘಟಕ ಹಾಗೂ ೨೦೦ ಕೆಎಲ್‌ಪಿಡಿ ಸಾಮರ್ಥ್ಯದ ಡಿಸ್ಟಿಲರಿ ಘಟಕ ಹೊಂದಿ ಸಹಕಾರ ರಂಗದಲ್ಲಿ ಮಾದರಿಯಾಗಿ ಹೊರಹೊಮ್ಮಿದೆ. ಸ್ವಾತಂತ್ರ‍್ಯ ಹೋರಾಟಗಾರರನ್ನು ಸ್ಮರಿಸುವ ಮೂಲಕ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ನಿರ್ದೇಶಕರಾದ ಮಹಾವೀರ ಕಾತ್ರಾಳೆ, ಭೀಮಗೌಡ ಪಾಟೀಲ, ಅಣ್ಣಾಸಾಬ ಇಂಗಳೆ, ವ್ಯವಸ್ಥಾಪಕ ನಿರ್ದೇಶಕ ಡಾ.ಆರ್.ಬಿ. ಖಂಡಗಾವೆ, ಕಾರ್ಖಾನೆ ವಿಭಾಗಾಽಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net