

ಚಿತ್ರದುರ್ಗ: ಜೀವ ವೈವಿಧ್ಯತೆ ರಕ್ಷಣೆಯಲ್ಲಿ ಪರಿಸರದ ಪಾತ್ರ ಅತ್ಯಂತ ಹಿರಿದಾಗಿದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು.
ನರೇಗಾದ ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿ ಪಡಿಸಿದ್ದ ಭರಮಸಾಗರ ಗ್ರಾಪಂ ವ್ಯಾಪ್ತಿಯಲ್ಲಿ ಚಿಕ್ಕೇನಹಳ್ಳಿ ಗೋಕಟ್ಟೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಹಾಗೂ ಪರಿಸರ ಜಾಗೃತಿ ಕಾರ‌್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಪರಿಸರದ ಸಮೃದ್ಧಿ ಆರೋಗ್ಯಕರ ಜೀವನಕ್ಕೆ ಸಹಕಾರಿ. ಗಾಳಿ, ನೀರು ಮತ್ತು ಆಹಾರಕ್ಕೆ ಜೀವ ಸಂಕುಲ ಪರಿಸರವನ್ನು ಅವಲಂಬಿಸಿದೆ. ಆಧುನಿಕ ಬದುಕಿನ ಗೀಳಿನಿಂದಾಗಿ ಪರಿಸರ ನಾಶವಾಗುತ್ತಿದ್ದು, ಮನುಷ್ಯನ ದುರಾಸೆಯಿಂದ ಗಾಳಿ, ನೀರು, ಮಣ್ಣು ಕಲುಷಿತಗೊಳ್ಳುತ್ತಿದೆ. ಕಾಡು ನಾಶವಾಗುತ್ತಿದ್ದು, ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶವಾಗುವುದನ್ನು ನಿಯಂತ್ರಿಸಬೇಕಿದೆ ಎಂದರು.
ಜಿಪಂ ಉಪಕಾರ‌್ಯದರ್ಶಿ ಕೆ.ತಿಮ್ಮಪ್ಪ, ಎಡಿಪಿಸಿ ಮೋಹನ್‌ಕುಮಾರ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಕೆ.ಹರೀಶ್, ತಾಪಂ ಇಒ ಅನಂತರಾಜು, ಸಹಾಯಕ ನಿರ್ದೇಶಕ ಎಚ್.ಯರ‌್ರಿಸ್ವಾಮಿ, ಎಸಿಎಫ್ ನಾಗೇಂದ್ರನಾಯ್ಕ, ವಲಯ ಅರಣ್ಯಾಧಿಕಾರಿ ಐ.ಬಿ.ಅಕ್ಷತಾ, ಡಿಆರ್‌ಎಫ್‌ಒ ಜಿ.ಎಂ.ವೀರೇಶ್, ಪಿಡಿಒ ಶ್ರೀದೇವಿ, ಸತ್ಯನಾರಾಯಣ, ಶಶಿಧರ್ ಇತರರು ಇದ್ದರು.
*ವಿಜೇತರಿಗೆ ಬಹುಮಾನ ವಿತರಣೆ
ಪರಿಸರ ಪ್ರಜ್ಞೆ ಜಾಗೃತಿ ಮೂಡಿಸಲು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದ ಕೋಡಿರಂಗವ್ವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ 7ನೇ ತರಗತಿಯ ದೀಕ್ಷೀತ್ (ಪ್ರ), 10ನೇ ತರಗತಿಯ ಮೋಹನ್, ಕಿರಣ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನಕ್ಕೆ ಭಾಜನರಾದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.