ಅಭಿವೃದ್ಧಿ ಕೆಲಸಗಳೇ ಗೆಲುವಿಗೆ ಶ್ರೀರಕ್ಷೆ

0412 AFZ-1
Published on

ಅಫಜಲಪುರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಸ್ವ ಪ್ರತಿಷ್ಠೆ ಬದಿಗೊತ್ತಿ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯಥರ್ಿಗಳನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಶಾಸಕ ಎಂ.ವೈ. ಪಾಟೀಲ್ ಕರೆ ನೀಡಿದರು.
ಪಟ್ಟಣದ ನ್ಯಾಶನಲ್ ಫಂಕ್ಷನ್ ಹಾಲ್ನಲ್ಲಿ ಶುಕ್ರವಾರ ಕಾಂಗ್ರೆಸ್ನಿಂದ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಚುನಾವಣೆ ಪೂರ್ವಭಾವಿಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿಗೆ ಸುಮಾರು 1,800 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನಮ್ಮ ಅಭಿವೃದ್ಧಿ ಕಾರ್ಯಗಳೇ ಪಕ್ಷದ ಬೆಂಬಲಿಗರ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಪ್ರತಿ ಗ್ರಾಪಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸಕರ್ಾರ ಅಧಿಕಾರ ಹಿಡಿಯುವ ದುರಾಸೆಯಿಂದ ಧರ್ಮ ಮತ್ತು ಜಾತಿಗಳ ಮಧ್ಯೆ ದ್ವೇಷ ಬಿತ್ತುತ್ತಿದೆ. ಹೀಗಾಗಿ ಬಿಜೆಪಿಯನ್ನು ಯಾರು ಬೆಂಬಲಿಸಬಾರದು. ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿ ಸಂಭವಿಸಿದ ರೈತರು ಹಾಗೂ ಜನರಿಗೆ ಸೂಕ್ತ ಪರಿಹಾರ ಕಲ್ಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ವಿಫಲವಾಗಿವೆ. ಬಿಜೆಪಿ ಸಕರ್ಾರ ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಕಿಡಿಕಾರಿದರು.
ಪ್ರಮುಖರಾದ ಎಸ್.ವೈ. ಪಾಟೀಲ್, ತುಕಾರಮಗೌಡ ಪಾಟೀಲ್, ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡ, ಮತಿನ್ ಪಟೇಲ್, ಪಪ್ಪು ಪಟೇಲ್, ಸಂಜೀವಕುಮಾರ ನಿಂಬಾಳ, ಮಹಾಂತೇಶ ಪಾಟೀಲ್, ಶಿವಶರಣಪ್ಪ ಹೀರಾಪುರ, ಸಿದ್ದು ಸಿರಸಗಿ, ಶಿವಾನಂದ ಗಾಡಿಸಾಹುಕಾರ, ಬಿಲ್ಲಮರಾಜ ಮ್ಯಾಳೇಸಿ, ಶಿವಾನಂದ ಗಾಡಿಸಾಹುಕಾರ, ಶಿವಪುತ್ರಪ್ಪ ಸಂಗೋಳಗಿ, ಸಾಹೇಬಗೌಡ ಪಾಟೀಲ್, ಸುಭಾಷ ರೂಗಿ, ಶರಣು ಕುಂಬಾರ, ನಾಗೇಶ ಕೊಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net