ಅಭಿವೃದ್ಧಿ ಕುಂಠಿತಕ್ಕೆ ಹಾಲಪ್ಪ ಕಾರಣ

27 RPT 1
Published on

ರಿಪ್ಪನ್‌ಪೇಟೆ: ಅಕಾರದ ಅವಯಲ್ಲಿ ಸ್ಪಂದಿಸದೆ ಈಗ ಆರೋಪ ಮಾಡುತ್ತಿರುವ ಮಾಜಿ ಶಾಸಕ ಹರತಾಳು ಹಾಲಪ್ಪ ಅವರೇ ಅಮ್ಮನಘಟ್ಟ ದೇವಸ್ಥಾನದ ಅಭಿವೃದ್ಧಿ ವಿರೋ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಆರೋಪಿಸಿದರು.

ಹರತಾಳು ಹಾಲಪ್ಪ ಶಾಸಕರಾಗಿದ್ದ 5 ವರ್ಷ ಅವಯಲ್ಲಿ ಒಂದೇ ಒಂದು ಬಾರಿಯೂ ದೇವಸ್ಥಾನಕ್ಕೆ ಆಗಮಿಸಿಲ್ಲ. ಹಲವು ಬಾರಿ ವ್ಯವಸ್ಥಾಪನ ಸಮಿತಿ ಸದಸ್ಯರು ಮತ್ತು ಭಕ್ತರು ಹಾಲಪ್ಪ ಅವರ ಮನೆಗೆ ಹೋಗಿ ದೇವಸ್ಥಾನ ಅಭಿವೃದ್ಧಿಗೆ ಹಣ ಮಂಜೂರು ಮಾಡುವಂತೆ ಮನವಿ ಮಾಡಿದ್ದಾಗ ಚಕಾರವೆತ್ತಲಿಲ್ಲ. ಆದರೆ ಚುನಾವಣೆ ಸಂದರ್ಭ ಒಂದು ಕೋಟಿ ರೂ. ಮಂಜೂರು ಮಾಡಿಸಿದ್ದಾಗಿ ಪ್ರಚಾರ ನಡೆಸಿದ್ದರು. ವಾಸ್ತವವಾಗಿ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆ ಆಗಿರಲಿಲ್ಲ ಎಂದು ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜನರಿಗೆ ಬರೀ ಸುಳ್ಳು ಹೇಳುತ್ತಲೇ ಬಂದಿರುವ ಹಾಲಪ್ಪ ಅವರು ಶಾಸಕ ಗೋಪಾಲಕೃಷ್ಣ ಬೇಳೂರು ವಿರುದ್ಧ ಮತ್ತೊಂದು ಹುರುಳಿಲ್ಲದ ಆರೋಪ ಮಾಡುತ್ತಿದ್ದಾರೆ. ಶಿಲಾಮಯ ದೇವಸ್ಥಾನದ ನೀಲಿನಕ್ಷೆ ತಯಾರಿಸಿ ಅಭಿವೃದ್ಧಿ ಯೋಜನೆ ರೂಪಿಸಿದ್ದು ನಾವು. ಕಟ್ಟಡ ನಿರ್ಮಾಣ ಸಂದರ್ಭ 58 ಲಕ್ಷ ರೂ.ಗಳನ್ನು ಸಮಿತಿಯಿಂದ ನೀಡಿದ್ದೇವೆ. ಅಂದು ದೇವಸ್ಥಾನ ಅಭಿವೃದ್ಧಿಗೆ ಆಸಕ್ತಿ ತೋರಿದ್ದರೆ, ಇನ್ನಷ್ಟು ಬದಲಾವಣೆ ತರಬಹುದಿತ್ತು. ಹಾಲಪ್ಪ ಆಗ ರಾಜಕಾರಣ ಮಾಡಿ ಈಗ ಸುಳ್ಳು ಹೇಳುತ್ತಿರುವುದು ಸರಿಯಲ್ಲ ಎಂದರು.

ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರವೌಳಿ, ಮುಖಂಡರಾದ ಬಂಡಿ ರಾಮಚಂದ್ರ, ಈಶ್ವರಪ್ಪ, ಅಮೀರ್ ಹಂಜಾ, ಎಂ.ಎಂ.ಪರಮೇಶ, ಗವಟೂರು ಗಣಪತಿ, ಆಸೀಫ್, ರವೀಂದ್ರ, ಮಧುಸೂಧನ, ಶ್ರೀಧರ, ಪ್ರಕಾಶ್ ಪಾಲೇಕರ್, ನೇಮಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net